ಫೈನಲ್‍ಗೆ ವ್ಯಾಟ್ಸನ್ ಅನುಮಾನ

ಆಭ್ಯಾಸದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿ ಭಾರತ ವಿರುದಟಛಿದ ಪಂದ್ಯದಿಂದ ಹೊರಗುಳಿದಿದ್ದ...
ಶೇನ್ ವ್ಯಾಟ್ಸನ್
ಶೇನ್ ವ್ಯಾಟ್ಸನ್
Updated on

ಸಿಡ್ನಿ: ಆಭ್ಯಾಸದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿ ಭಾರತ ವಿರುದಟಛಿದ ಪಂದ್ಯದಿಂದ ಹೊರಗುಳಿದಿದ್ದ ಆಸ್ಟ್ರೇಲಿಯಾದ ಆಲ್ರೌಂಡರ್ ಶೇನ್ ವ್ಯಾಟ್ಸನ್, ತ್ರಿಕೋನನ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.

ಫೈನಲ್ ಪಂದ್ಯದ ವೇಳೆಗೆ ಫಿಟ್ ಆಗುವ ಬಗ್ಗೆ ಸ್ವತಃ ವ್ಯಾಟ್ಸನ್ ಅವರೇ ಅನುಮಾನ ವ್ಯಕ್ತಪಡಿಸಿದ್ದಾರೆ. ಗಾಯದ ಸಮಸ್ಯೆ ಗಂಭೀರವಾಗಿಲ್ಲ. ಆದರೆ, ಮುಂಜಾಗರೂಕತೆಗಾಗಿ ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಫೈನಲ್ ಪಂದ್ಯದ ವೇಳೆಗೆ ಫಿಟ್ ಆದರೆ ಪರ್ಥ್‍ಗೆ ತೆರಳುತ್ತೇನೆ. ಆದರೆ, ಒಂದುವೇಳೆ ಸಂಪೂರ್ಣವಾಗಿ ಗುಣಮುಖವಾಗದಿದ್ದರೆ, ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಆಡುತ್ತೇನೆ ಎಂದು ತಿಳಿಸಿದ್ದಾರೆ.

ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್ ಕ್ಲಾರ್ಕ್ ಅವರು ಗಾಯದಿಂದ ಇನ್ನು ಚೇತರಿಸಿಕೊಂಡಿಲ್ಲ. ಈ ವೇಳೆ ವ್ಯಾಟ್ಸನ್ ಗಾಯಗೊಂಡಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಮೈಕಲ್ ಕ್ಲಾರ್ಕ್ ಮತ್ತೆ ತಂಡಕ್ಕೆ ಮರಳಿದರೆ, ಜಾರ್ಜ್ ಬೇಯ್ಲಿ ಸ್ಥಾನಕ್ಕೆ ಕುತ್ತು ಬರಲಿದೆ. ಇನ್ನು ಸ್ಟೀವನ್ ಸ್ಮಿತ್, ಕ್ಲಾರ್ಕ್ ಜತೆ ತಂಡದಲ್ಲಿ ಸ್ಥಾನ ಪಡೆಯುವರೆ ಎಂಬ ಕುತೂಹಲ ಮೂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com