

ಹರಾರೆ: ಜಿಂಬಾಬ್ವೆ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಯಾಸದ ಗೆಲವು ಸಾಧಿಸಿದ್ದು, ಸರಣಿ ಕೈವಶ ಮಾಡಿಕೊಂಡಿದೆ.
ಹರಾರೆ ಸ್ಫೋರ್ಟ್ಸ್ ಕ್ಲಬ್ ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಜಿಂಬಾಬ್ವೆ ತಂಡವನ್ನು 209 ರನ್ ಗಳಿಗೆ ಆಲೌಟ್ ಮಾಡಿದ್ದು, 63 ರನ್ ಗಳ ಜಯ ಸಾಧಿಸಿದೆ.
ಜಿಂಬಾಬ್ವೆ ಪರ ಸಿಬಾಂಡ 2, ಚಿಭಾಭಾ 72, ಮಸಕ್ಡಜಾ 5, ಚಿಗುಂಬರ 9, ವಿಲಿಯಮ್ಸ್ 20, ಸಿಕಂದರ್ ರಾಜಾ 18, ಮುತುಂಬಮಿ 32, ಕ್ರೇಮೆರ್ 27, ಮಡ್ಜಿವ 0, ತಿರುಪೊನಾ 6 ರನ್ ಗಳಿಸಿದ್ದಾರೆ.
ಭಾರತ ಪರ ಭುವನೇಶ್ವರ್ ಕುಮಾರ್ 4, ಕುಲಕರ್ಣಿ, ಹರ್ಭಜನ್ ಸಿಂಗ್, ಅಕ್ಷರ ಪಟೇಲ್, ಸ್ಟುವರ್ಟ್ ಬಿನ್ನಿ ತಲಾ 1 ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಪರ ಅಂಜಿಕ್ಯಾ ರಹಾನೆ 63, ಮುರಳಿ ವಿಜಯ್ 72, ಅಂಬಟಿ ರಾಯುಡು 41, ಮನೀಷ್ ತಿವಾರಿ 22, ರಾಬಿನ್ ಉತ್ತಪ್ಪ 13, ಸ್ಟುವರ್ಟ್ ಬಿನ್ನಿ 25, ಜಾದವ್ 16, ಅಕ್ಷರ ಪಟೇಲ್ 1 ರನ್ ಗಳಿಗೆ ಔಟಾದರು. ಹರ್ಭಜನ್ ಸಿಂಗ್ ಅಜೇಯ 5 ಹಾಗೂ ಭುವನೇಶ್ವರ್ ಕುಮಾರ್ 2 ರನ್ ಗಳಿಸಿದ್ದಾರೆ.