ನನ್ನ ಗೆಲುವು ಭಾರತದ ಹುಡುಗಿಯರಿಗೆ ಪ್ರೇರಣೆಯಾಗಲಿದೆ: ಸಾನಿಯಾ ಮಿರ್ಜಾ
ಲಂಡನ್: ಗ್ರಾಂಡ್ ಸ್ಲಾಮ್ ಪ್ರಶಸ್ತಿಯ ಕನಸನ್ನು ಕಾಣುವ ಹುಡುಗಿಯರಿಗೆ ನನ್ನ ಈ ಗೆಲುವು ಹೆಚ್ಚು ಪ್ರೇರಣೆಯಾಗಲಿದೆ ಎಂದು ಭಾವಿಸುತ್ತೇನೆ ಎಂದು ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಭಾನುವಾರ ಹೇಳಿದ್ದಾರೆ.
ಶನಿವಾರ ನಡೆದ ಗ್ರಾಂಡ್ ಸ್ಲಾಮ್ ಪ್ರಶಸ್ತಿಯ ಅಂತಿಮ ಹೋರಾಟದಲ್ಲಿ ಅಗ್ರ ಶ್ರೇಯಾಂಕದ ಸಾನಿಯಾ- ಹಿಂಗಿಸ್ ಸೇರಿಕೊಂಡು ರಷ್ಯಾದ ಜೋಡಿಯಾದ ಎಕಾಟೆರಿನಾ ಮಕರೋವಾ-ಎಲೇನಾ ವೆಸ್ನಿನಾ ವಿರುದ್ಧ 5-7, 7-6 (7/4), 7-5 ಅಂತರದಲ್ಲಿ ಜಯ ಸಾಧಿಸಿದ್ದರು.
ತಮ್ಮ ಗೆಲವು ಕುರಿತಂತೆ ಇಂದು ಮಾತನಾಡಿರುವ ಸಾನಿಯಾ ಮಿರ್ಜಾ ಅವರು, ಪ್ರತಿಯೊಂದು ಮಕ್ಕಳಿಗೂ ಒಂದು ಕನಸು ಇದ್ದ ಹಾಗೆ ನಾವು ಸಹ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗೆ ಹಲವು ವರ್ಷಗಳಿಂದಲೂ ಕನಸು ಕಂಡಿದ್ದೆವು. ಆ ಕನಸು ನಿನ್ನೆ ನನಸಾಯಿತು. ಪ್ರಶಸ್ತಿ ಗೆದ್ದದ್ದು ಬಹಳ ಸಂತಸ ತಂದಿದೆ. ಆಟವಾಡುತ್ತಿದ್ದಾಗ ಅಂತಿಮ ಘಟ್ಟದಲ್ಲಿ ಸಾಕಷ್ಟು ಒತ್ತಡಗಳಿದ್ದವು. ಗೆಲುವು ಸಾಧಿಸಿದ್ದು ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ಗೆಲವು ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಸಾಧಿಸಲು ಕನಸು ಕಾಣುತ್ತಿರುವ ಭಾರತೀಯ ಹುಡುಗಿಯರಿಗೂ ಪ್ರೇರಣೆಯಾಗಲಿದೆ ಎಂದು ನಂಬುದತ್ತಿದ್ದೇನೆ.
ಪಂದ್ಯಾವಳಿ ವೇಳೆ ಸಾಕಷ್ಟು ಭಾರತೀಯರು ನೆನೆದಿರುವುದು ಕಂಡುಬಂದಿತು. ನನ್ನ ತವರು ಭಾರತ ಇಲ್ಲಿಯೇ ಇದೆ ಎಂಬಂತಹ ವಾತಾವರಣವಿತ್ತು. ಆಟವಾಡುವಾಗ ನಮ್ಮ ಪರವಾಗಿ ಪ್ರೋತ್ಸಾಹ, ಬೆಂಬಲಗಳು ಹೆಚ್ಚಾಗಿತ್ತು ಎಂದು ಹೇಳಿದ್ದಾರೆ.
ಸಾನಿಯಾ ಮಿರ್ಜಾ ಈವರೆಗೆ 2011 ರಲ್ಲಿ ಒಂದು ಬಾರಿಯಷ್ಟೇ ಗ್ರ್ಯಾನ್ ಸ್ಲಾಮ್ ಪಂದ್ಯಾವಳಿಯ ವನಿತಾ ಡಬಲ್ಸ್ ನಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದರು. ಅಂದು ನಡೆದ ಪಂದ್ಯಾವಳಿಯಲ್ಲಿ ಜತೆಗಿದ್ದವರು ಎಲೆನಾ ವೆಸ್ನಿನಾ. ಇವರನ್ನು ಜೆಕ್ ಆಟಗಾರ್ತಿಯರಾದ ಆ್ಯಂಡ್ರಿಯಾ ಲವಕೋವಾ-ಲೂಸಿ ರಡೇಕಾ ಸೇರಿಕೊಂಡು 6-4, 6-3ರಿಂದ ಸೋಲಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

