ಬಾಂಗ್ಲಾದೇಶಕ್ಕೆ 8 ವಿಕೆಟ್ ಗಳ ಸುಲಭ ಜಯ

ವೇಗಿಗಳಾದ ಮುಸ್ತುಫಿಜುರ್ ರೆಹಮಾನ್ ಹಾಗೂ ನಾಸಿರ್ ಹುಸೇನ್ ಅವರ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ,...
ಬಾಂಗ್ಲಾ ಕ್ರಿಕೆಟಿಗ ಸೌಮ್ಯ ಸರ್ಕಾರ್
ಬಾಂಗ್ಲಾ ಕ್ರಿಕೆಟಿಗ ಸೌಮ್ಯ ಸರ್ಕಾರ್
Updated on: 

ಮೀರ್ಪುರ: ವೇಗಿಗಳಾದ ಮುಸ್ತುಫಿಜುರ್ ರೆಹಮಾನ್ ಹಾಗೂ ನಾಸಿರ್ ಹುಸೇನ್ ಅವರ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ, ಭಾನುವಾರ ನಡೆದ ಬಾಂಗ್ಲಾದೇಶ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 7 ವಿಕೆಟ್‍ಗಳ ಸೋಲು ಅನುಭವಿಸಿದೆ. ಈ ಗೆಲುವಿನೊಂದಿಗೆ,
ಬಾಂಗ್ಲಾದೇಶ ತಂಡ, ಮೂರು ಪಂದ್ಯಗಳ ಈ ಏಕದಿನ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ, 46 ಓವರ್‍ಗಳಲ್ಲಿ ಕೇವಲ 162 ರನ್ ದಾಖಲಿಸಿ ಆಲೌಟ್ ಆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ, 27.4 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿ ಜಯದ ನಗೆ ಬೀರಿತು. ಇಲ್ಲಿನ ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಟಾಸ್ ಗೆದ್ದಿದ್ದ ದಕ್ಷಿಣ ಆಫ್ರಿಕಾ ತಂಡ, ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಆದರೆ, ಹರಿಣಗಳ ಉತ್ಸಾಹವನ್ನು ಭಂಗಗೊಳಿಸಿದ ಬಾಂಗ್ಲಾ ಬೌಲರ್‍ಗಳು ಆಫ್ರಿಕನ್ನರು ತತ್ತರಿಸುವಂತೆ ಮಾಡಿದರು. ಕೇವಲ 100 ರನ್ ದಾಖಲಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡ ಹರಿಣಗಳು, ನಂತರ 62 ರನ್‍ಗೆ ಸರ್ವ ಪತನಗೊಂಡಿತು. ಮುಸ್ತಫಿಜುರ್, ನಾಸಿರ್ ಹುಸೇನ್ ತಲಾ 3 ವಿಕೆಟ್ ಪಡೆದರೆ, ರುಬೆಲ್ 2 ಹಾಗೂ ಮಶ್ರಫೆ ಅವರು 1 ವಿಕೆಟ್ ಗಳಿಸಿದರು.

ಆದರೂ, ಜಯ ಹೊಸ್ತಿಲಲ್ಲಿ ಅರ್ಧಶತಕ ಗಳಿಸಿದ್ದ ಮೊಹ್ಮದುಲ್ಲಾ (50 ರನ್, 64 ಎಸೆತ, 6 ಬೌಂಡರಿ) ಅವರು ವಿಕೆಟ್ ಒಪ್ಪಿಸಿದರು. ನಂತರ ಬಂದ, ಶಕೀಬ್ ಅಲ್ ಹಸನ್ ಜೊತೆಗೂಡಿದ ಸೌಮ್ಯ  ಸರ್ಕಾರ್ (ಅಜೇಯ 88 ರನ್, 79ಎಸೆತ, 13 ಬೌಂಡರಿ, 1 ಸಿಕ್ಸರ್) ತಂಡವನ್ನು ಗೆಲವಿನ ದಡ ಮುಟ್ಟಿಸಿದರು.

ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ 46 ಓವರ್ ಳಲ್ಲಿ 162 (ಡು ಪ್ಲೆಸಿಸ್ 41, ಬೆಹರ್ದಿನ್ 36; ಮುಸ್ತಫಿಜುರ್ 38ಕ್ಕೆ 3): ಬಾಂಗ್ಲಾದೇಶ 27.4 ಓವರ್‍ಗಳಲ್ಲಿ 3 ವಿಕೆಟ್‍ಗೆ 167 (ಸೌಮ್ಯ ರ್ಕಾರ್ ಅಜೇಯ 88, ಮಹ್ಮದುಲ್ಲಾ 50; ಬಾಡಾ 45ಕ್ಕೆ 2).

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com