ಭಾರತ-ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯ

ಭಾರತ-ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯ ನಿರೀಕ್ಷೆಯಂತೆಯೇ ಭಾನುವಾರ ಡ್ರಾದಲ್ಲಿ ಅಂತ್ಯಗೊಂಡಿದೆ.
ಪಂದ್ಯದ ಬಳಿಕ ಪರಸ್ಪರ ಅಭಿನಂದಿಸಿಕೊಂಡ ಉಭಯ ತಂಡದ ಆಟಗಾರರು
ಪಂದ್ಯದ ಬಳಿಕ ಪರಸ್ಪರ ಅಭಿನಂದಿಸಿಕೊಂಡ ಉಭಯ ತಂಡದ ಆಟಗಾರರು
Updated on: 

ಫಾತುಲ್ಲಾ: ಭಾರತ-ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯ  ನಿರೀಕ್ಷೆಯಂತೆಯೇ ಭಾನುವಾರ ಡ್ರಾದಲ್ಲಿ ಅಂತ್ಯಗೊಂಡಿದೆ.

ಬಾಂಗ್ಲಾದೇಶ ಹಾಗೂ ಭಾರತ ನಡುವಿನ ಏಕೈಕ ಟೆಸ್ಟ್ ಪಂದ್ಯ ನೀರಸ ಡ್ರಾ ನಲ್ಲಿ ಅಂತ್ಯಗೊಂಡಿದ್ದು, ಅಂತಿಮ ದಿನವಾದ ಭಾನುವಾರ ಕೂಡಾ ಮಳೆರಾಯ ಆಟಕ್ಕೆ ಅಡ್ಡಿ ಪಡಿಸಿದನು. ಮಳೆಯ ಕಾಟದ ನಡುವೆಯೇ ಬಾಂಗ್ಲಾದೇಶ ತನ್ನ ಮೊದಲ ಇನ್ನಿಂಗ್ಸ್ 256 ರನ್ ಗಳಿಗೆ ಆಲ್ ಔಟ್ ಆಗುವ ಮೂಲಕ ಪೂರ್ಣಗೊಳಿಸಿತು. ಪಂದ್ಯದ ನಾಲ್ಕನೇ ದಿನದಂತ್ಯಕ್ಕೆ 111 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾದೇಶ ಅಂತಿಮ ದಿನವಾದ ಇಂದು ಕೇವಲ 256ರನ್ ಗಳಿಗೆ ಸರ್ವಪತನ ಕಂಡಿತು.

ಮೊದಲ ಇನ್ನಿಂಗ್ಸ್ ನಲ್ಲಿ ಬಾಂಗ್ಲಾದೇಶ ಕೊನೆಯ ದಿನ 11 ರನ್ ಗಳಿಸುವಷ್ಟರಲ್ಲೇ ಶಕೀಬ್ ಅಲ್ ಹಸನ್ ವಿಕೆಟ್ ಕಳೆದುಕೊಂಡಿತು. ನಂತರ ಆರ್ ಆಶ್ವಿನ್ ಸ್ಪಿನ್ ಕೈಚಳಕಕ್ಕೆ ಸಿಲುಕಿ ಸತತವಾಗಿ ವಿಕೆಟ್ ಕಳೆದುಕೊಳ್ಳಲಾರಂಭಿಸಿತು. 25 ಓವರ್ ಗಳಲ್ಲಿ 87 ರನ್ನಿತ್ತು ಅಶ್ವಿನ್ 5 ವಿಕೆಟ್ ಕಿತ್ತರು. ಬಾಂಗ್ಲಾ ಪರ ವಿಕೆಟ್ ಕೀಪರ್ ಲಿಟ್ಟನ್ ದಾಸ್ 44ರನ್ ಗಳಿಸಿದರೆ, ಸೌಮ್ಯ ಸರ್ಕಾರ್ 37 ರನ್ ಗಳಿಸಿದರು.

206 ರನ್ ಗಳ ಹಿನ್ನಡೆಯಲ್ಲಿದ್ದ ಬಾಂಗ್ಲಾದೇಶವನ್ನು ಭಾರತ ತಂಡ ಫಾಲೋಆನ್ ಹೇರಿ ಮತ್ತು ಬ್ಯಾಟಿಂಗ್ ಗೆ ಇಳಿಸಿತು. ಆ ಮೂಲಕ ಬೇಗನೇ ವಿಕೆಟ್ ಪಡೆದು ಪಂದ್ಯ ಗೆಲ್ಲುವ ಆಸೆ ಹೊಂದಿತ್ತು. ಆದರೆ ಭಾರತ ಗೆಲುವಿನ ಆಸೆಗೆ ಮಳೆರಾಯ ಅಡ್ಡಿಯಾದ. ಸಮಯದ ಅಭಾವ ಮತ್ತು ಮಳೆರಾಯನ ನಿರಂತರ ಕಾಟದಿಂದಾಗಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಎರಡನೇ ಇನ್ನಿಂಗ್ಸ್ ನಲ್ಲಿ ಬಾಂಗ್ಲಾದೇಶ 23 ರನ್ ಗಳಿಸಿತ್ತು. ಅಶ್ವಿನ್ ಈ ಪಂದ್ಯದಲ್ಲಿ 87 ರನ್ ಗೆ 5 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಮಾಡಿದ ಕೀರ್ತಿಗೆ ಪಾತ್ರರಾದರು. ಉಳಿದಂತೆ ಹರ್ಭಜನ್ ಸಿಂಗ್ 3 ಮತ್ತು ವರಣ್ ಆ್ಯರೋನ್ 1 ವಿಕೆಟ್ ಪಡೆದರು.

ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ಪರ ಉತ್ತಮವಾಗಿ ಬ್ಯಾಟ್ ಮಾಡಿದ ಶಿಖರ್ ಧವನ್ ಅರ್ಹವಾಗಿಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com