22 ರಿಂದ ಸೇವ್ ದ ಟೈಗರ್ ಕ್ರಿಕೆಟ್ ಪಂದ್ಯಾವಳಿ ಆರಂಭ

ಸೇವ್ ದ ಟೈಗರ್ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಮೈಸೂರು ವಲಯ ವ್ಯಾಪ್ತಿಯಲ್ಲಿ ಜೂ. 22 ರಿಂದ 30 ರವರೆಗೆ ಆಯೋಜಿಸಲಾಗಿದೆ. 14 ಮತ್ತು 16 ವರ್ಷದೊಳಗಿನವರ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎರಡೂ ವಿಭಾಗಗಳಿಂದ ತಲಾ 8 ತಂಡಗಳು ಪಾಲ್ಗೊಳ್ಳುತ್ತಿವೆ...
22 ರಿಂದ ಸೇವ್ ದ ಟೈಗರ್ ಕ್ರಿಕೆಟ್ ಪಂದ್ಯಾವಳಿ ಆರಂಭ (ಸಾಂದರ್ಭಿಕ ಚಿತ್ರ)
22 ರಿಂದ ಸೇವ್ ದ ಟೈಗರ್ ಕ್ರಿಕೆಟ್ ಪಂದ್ಯಾವಳಿ ಆರಂಭ (ಸಾಂದರ್ಭಿಕ ಚಿತ್ರ)
Updated on: 

ಮೈಸೂರು: ಸೇವ್ ದ ಟೈಗರ್ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಮೈಸೂರು ವಲಯ ವ್ಯಾಪ್ತಿಯಲ್ಲಿ ಜೂ. 22 ರಿಂದ 30 ರವರೆಗೆ ಆಯೋಜಿಸಲಾಗಿದೆ. 14 ಮತ್ತು 16 ವರ್ಷದೊಳಗಿನವರ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎರಡೂ ವಿಭಾಗಗಳಿಂದ ತಲಾ 8 ತಂಡಗಳು ಪಾಲ್ಗೊಳ್ಳುತ್ತಿವೆ.

ಕ್ರಿಕೆಟ್‍ಗೆ ಉತ್ತೇಜನ ನೀಡುವುದು, ನಶಿಸುತ್ತಿರುವ ಹುಲಿ ಸಂತತಿಯನ್ನು ಉಳಿಸುವುದು, ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ ಜಾಗೃತಿ ಮೂಡಿಸಲು ಸೈಕಲ್ ಪ್ಯೂರ್ ಅಗರಬತ್ತಿ ಪ್ರಾಯೋಜಕತ್ವದಲ್ಲಿ ಈ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಈ ಹಿಂದೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಯಶಸ್ಸಿನ ಬಳಿಕ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಪಂದ್ಯಾವಳಿಯ ಸಂಚಾಲಕ ಜೋಸೆಫ್ ಹೂವರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೆಎಸ್‍ಸಿಎ ಮಾನ್ಯತೆ ಹೊಂದಿದ ಶಾಲೆಗಳು ಮತ್ತು ಕ್ಲಬ್ ಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿವೆ. 14 ವರ್ಷದೊಳಗಿನವರ ಪಂದ್ಯಗಳು ಮಾನಸ ಗಂಗೋತ್ರಿಯ ಕಾಫಿ ಬೋರ್ಡ್ ಮೈದಾನ, 16 ವರ್ಷದೊಳಗಿನವರ ಪಂದ್ಯಗಳು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಪ್ರತಿ ವಿಭಾಗದಲ್ಲಿ ಎ ಮತ್ತು ಬಿ ಎಂದು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ ಎಂದು ಅವರು ವಿವರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com