

ಈಸ್ಟ್ ಬರ್ನ್(ಲಂಡನ್): ವಿಶ್ವದ ಮಹಿಳೆಯರ ಡಬಲ್ಸ್ ನ ನಂಬರ್ ಒನ್ ಜೋಡಿಯಾದ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್, ಶುಕ್ರವಾರ ನಡೆದ ಡಬ್ಲ್ಯೂಟಿವಿ ಏಗಾನ್ ಟೆನಿಸ್ ಟೂರ್ನಿಯ ಮಹಿಳೆಯರ ವಿಭಾಗದ ಉಪಾಂತ್ಯದಲ್ಲಿ, ಕೆರೊಲೀನ್ ಗಾರ್ಸಿಯಾ(ಫ್ರಾನ್ಸ್) ಹಾಗೂ ಕಟಾರಿಯಾ ಸ್ರೆಬೊಟ್ನಿಕ್(ಸ್ಲೊವಾಕಿಯಾ) ಜೋಡಿ ವಿರುದ್ಧ 5-7, 4-6 ಸೆಟ್ ಗಳ ಅಂತರದಲ್ಲಿ ಸೋಲು ಕಂಡಿತು.
ಈ ಪಂದ್ಯದಲ್ಲಿ ಸೋತರೂ, ಸುಮಾರು ರು.7 ಲಕ್ಷ ಮೊತ್ತದ ನಗದು ಬಹುಮಾನವನ್ನು ಹಂಚಿಕೊಂಡ ಸಾನಿಯಾ-ಹಿಂಗಿಸ್ ಜೋಡಿ, 185 ರ್ಯಾಂಕಿಂಗ್ ಅಂಕಗಳನ್ನು ಗಳಿಸಿತು.