

ಆ್ಯಂಟ್ವೆರ್ಪ್ :(ಬೆಲ್ಜಿಯಂ) ಗುಂಪು ಹಂತದಲ್ಲಿ ಅಸ್ಥಿರ ಪ್ರದರ್ಶನ ನೀಡಿರುವ ಭಾರತ ವನಿತಾ ಹಾಕಿ ತಂಡಕ್ಕೆ ಇಂದು ನಡೆಯಲಿರುವ ವಿಶ್ವ ಹಾಕಿ ಸೆಮಿಫೈನಲ್ ಲೀಗ್ ಪಂದ್ಯಾವಳಿಯಲ್ಲಿನ ಕ್ವಾರ್ಟರ್ ಫೈನಲ್ ಪಂದ್ಯವು ಸತ್ವಪರೀಕ್ಷೆಯಾಗಿದೆ.
ಒಲಂಪಿಕ್ ಚಾಂಪಿಯನ್ಸ್ ಹಾಲೆಂಡ್ ನಾರಿಯರ ವಿರುದ್ಧದ ಪಂದ್ಯವು ರಿತು ರಾಣಿ ಸಾರಥ್ಯದ ಭಾರತ ಮಹಿಳಾ ಹಾಕಿ ತಂಡಕ್ಕೆ ಸವಾಲಿನಂತಿದೆ. ಕಳೆದ ಪಂದ್ಯಗಳಲ್ಲಿ ಉತ್ಸಾಹಭರಿತ ಪ್ರದರ್ಶನ ಹೊರಹೊಮ್ಮಿದರೂ, ರಕ್ಷಣಾ ವಲಯವನ್ನು ಸಾಕಷ್ಟು ಬಲಪಡಿಸದೆ ಹೋದದ್ದು ಭಾರತ ತಂಡದ ಸೋಲಿಗೆ ಕಾರಣವಾಗಿದೆ. ಈ ದಿಸೆಯಲ್ಲಿ ಇಂದಿನ ಪಂದ್ಯದಲ್ಲಿ ಈ ಹಿಂದಿನ ಲೋಪದತ್ತ ಆದ್ಯ ಗಮನ ಹರಿಸಬೇಕಾದದ್ದು ತೀರಾ ಅಗತ್ಯವಾಗಿದೆ.