

ಪರ್ತ್: ವೆಸ್ಟ್ ಇಂಡೀಸ್ ನೀಡಿದ ಅಲ್ಪ ಮೊತ್ತದ ಗುರಿಯನ್ನು ತಲುಪಲು ಭಾರತ ಪ್ರಯಾಸ ಪಡುಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ವೆಸ್ಟ್ ಇಂಡೀಸ್ ನೀಡಿದ ಅಲ್ಪ ಮೊತ್ತವನ್ನು ಬೆನ್ನತ್ತಿದ್ದ ಭಾರತ ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಸೋಲಿನ ಭೀತಿ ಎದುರಿಸುತ್ತಿದೆ. 153 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದೆ. ಈ ನಡುವೆ ನಾಯಕ ಧೋನಿ ಸಂಯಮ ಆಟ ಪ್ರದರ್ಶಿಸಿ ಭಾರತಕ್ಕೆ ಚೇತರಿಕೆ ನೀಡುತ್ತಿದ್ದಾರೆ.
ಪರ್ತ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ಮೊದಲು ಬ್ಯಾಟ್ ಮಾಡಿತು. ಭಾರತ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ವಿಂಡೀಸ್ ಕೇವಲ 182 ರನ್ ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಕೇವಲ 9 ರನ್ ಗಳಿಸಿ ಪೆವಿಲಿಯನ್ ಸೇರಿದರು. ರೋಹಿತ್ ಶರ್ಮಾ ಕೂಡ 7 ರನ್ ಗಳಿಸಿ ಧವನ್ ಹಾದಿ ಹಿಡಿದರು.
ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ವಿರಾಟ್ ಕೊಹ್ಲಿ 33 ರನ್ ಗಳಿಸಿದ್ದಾಗ ಬಾರಿ ಹೊಡೆತಕ್ಕೆ ಕೈ ಹಾಕಿ ಸ್ಯಾಮುಯಸ್ಸ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಬಂದ ಅಂಜಿಕ್ಯಾ ರಹಾನೆ ಸಂಯಮ ಆಟ ಪ್ರದರ್ಶಿಸಿದರು ಆದರೆ 14 ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಬಂದ ಸುರೇಶ್ ರೈನಾ ಮೊತ್ತಮ ಮೊತ್ತ ಕಲೆ ಹಾಕುವ ಮೂಲಕ ಭಾರತಕ್ಕೆ ಚೇತರಿಕೆ ತಂದರು. 22 ರನ್ ಗಳಿಸಿದ್ದಾಗೆ ಕೀಪರ್ ರಾಮ್ದಿನ್ ಗೆ ಕ್ಯಾಚ್ ನೀಡಿದರು. ಇದರೊಂದಿಗೆ ಪಂದ್ಯ ರೋಚಕ ತಿರುವು ಪಡೆದುಕೊಂಡಿದೆ.
ವೆಸ್ಟ್ ಇಂಡೀಸ್ ಪರ ಟೈಲರ್, ರಸೂಲ್ ತಲಾ 2 ವಿಕೆಟ್ ಪಡೆದರೆ, ರೋಚ್, ಸ್ಮಿತ್ ತಲಾ 1 ವಿಕೆಟ್ ಪಡೆದಿದ್ದಾರೆ.