

ನವದೆಹಲಿ: ಶನಿವಾರ ಇಂಡಿಯನ್ ಓಪನ್ ಸೂಪರ್ ಸೀರೀಸ್ ಸೆಮಿಫೈನಲ್ ನಲ್ಲಿ ಕರೋಲಿನಾ ಮರೀನ್ ಪರಾಭವಗೊಂಡ ಕಾರಣ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ನಂಬರ್ 1 ಪಟ್ಟಕ್ಕೇರಿದ್ದಾರೆ.
ಪ್ರಸ್ತುತ ಎರಡನೇ ಸೆಮಿಫೈನಲ್‌ನಲ್ಲಿ ಸೈನಾ ಜಪಾನ್‌ನ ಯೂ ಹಷಿಮೊಟೋ ಅವರನ್ನು ಎದುರಿಸಲಿದ್ದಾರೆ.
ಪುರುಷರ ಬ್ಯಾಡ್ಮಿಂಟನ್‌ನಲ್ಲಿ ಪ್ರಕಾಶ್ ಪಡುಕೋಣೆ ನಂಬರ್ 1 ಸ್ಥಾನ ಪಡೆದ ಮೊದಲ ಭಾರತೀಯನಾಗಿದ್ದಾರೆ. ಅದೇ ವೇಳೆ ಅಗ್ರ ಸ್ಥಾನಕ್ಕೇರಿರುವ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಸೈನಾ ಪಾತ್ರರಾಗಿದ್ದಾರೆ.
ಸೈನಾ ಸಾಧನೆ ಶ್ಲಾಘಿಸಿದ ಪ್ರಧಾನಿ ಮೋದಿ
ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಸೈನಾ ನೆಹ್ವಾಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದು, ಸೈನಾ ಅವರು ದೇಶವೇ ಹೆಮ್ಮೆ ಪಡುವಂತ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.