ಅನುಷ್ಕಾ ಬೆಂಬಲಕ್ಕೆ ಬಾಲಿವುಡ್

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರು ಎಂಬಂತೆ, ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಸೋತಿದ್ದಕ್ಕೆ ಅನುಷ್ಕಾ ಶರ್ಮಾ ಅವರ ಮೇಲೆ ಕುಹಕಿಗಳು...
ನಟಿ ಅನುಷ್ಕಾ ಶರ್ಮಾ (ಸಂಗ್ರಹ ಚಿತ್ರ)
ನಟಿ ಅನುಷ್ಕಾ ಶರ್ಮಾ (ಸಂಗ್ರಹ ಚಿತ್ರ)
Updated on

ಮುಂಬೈ: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರು ಎಂಬಂತೆ, ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಸೋತಿದ್ದಕ್ಕೆ ಅನುಷ್ಕಾ ಶರ್ಮಾ ಅವರ ಮೇಲೆ ಕುಹಕಿಗಳು ಗೂಬೆ ಕೂರಿಸಿದ್ದು, ಸ್ಯಾಡಿಸ್ಟ್ ಮನಸ್ಸುಗಳಿಗೆ ಹಿಡಿದ ಕನ್ನಡಿ. ತಮ್ಮ ಪ್ರಿಯಕರ ವಿರಾಟ್ ಕೊಹ್ಲಿ ಹಾಗೂ ಟೀಂ ಇಂಡಿಯಾವನ್ನು ಬೆಂಬಲಿಸಲು ಆಕೆ ಪಂದ್ಯ ನೋಡಲು ಹೋಗಿದ್ದೇ ಆಡಿಕೊಳ್ಳುವವರಿಗೆ ತಪ್ಪಾಗಿ ಕಂಡಿತು.

ಆದರೆ, ಇದೀಗ ಅನುಷ್ಕಾಗೆ ಬಾಲಿವುಡ್ ನಟ, ನಟಿಯರಿಂದ ಬೆಂಬಲ ಸಿಕ್ಕಿದೆ. ಆಕೆ ಮಾಡದ ತಪ್ಪಿಗೆ ಆಕೆಯನ್ನು ದೂಷಿಸುವುದು ಸರಿಯಲ್ಲ ಎಂದು ನಟಿಯರಾದ ಪ್ರಿಯಾಂಕಾ ಚೋಪ್ರಾ, ದಿಯಾ ಮಿರ್ಜಾ, ಸುಷ್ಮಿತಾ ಸೇನ್, ರಿಶಿ ಕಪೂರ್, ಅಭಿಶೇಕ್ ಬಚ್ಚನ್ ಹೇಳಿದ್ದಾರೆ.

ಮಿರ್ಜಾ ಗರಂ: ಟೆನಿಸ್ ತಾರೆ ಸಾನಿಯಾ ಮಿರ್ಜಾ ಸಹ ಟ್ವಿಟರ್‍ನಲ್ಲಿ ಕುಹಕಿಗಳ ವಿರುದ್ಧ ಕೋಪ ವ್ಯಕ್ತಪಡಿಸಿದ್ದಾರೆ.  

ನೋವಾಗಿದೆ...ಖಾಸಗಿ ವಾಹಿನಿಗೆ ಸಂದರ್ಶನ ನೀಡಿರುವ ನಟಿ ಅನುಷ್ಕಾ ಶರ್ಮಾ
ಭಾರತ ತಂಡದ ಸೋಲಿನ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ವಿನಾಕಾರಣ ಟೀಕಿಸಿದ್ದಕ್ಕೆ ಮನಸ್ಸಿಗೆ ನೋವಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com