ಶೂಟರ್ ವಿಜಯ್ ಗೆ 2 ಪದಕ

ಲಂಡನ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ವಿಜಯ್ ಕುಮಾರ್ 13ನೇ ಏಷ್ಯನ್ ಶೂಟಿಂಗ್ ಚಾಂಪಿಯನ್‍ಶಿಪ್‍ನ ಅಂತಿಮ...
ವಿಜಯ್ ಕುಮಾರ್
ವಿಜಯ್ ಕುಮಾರ್

ಕುವೈತ್: ಲಂಡನ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ವಿಜಯ್ ಕುಮಾರ್ 13ನೇ ಏಷ್ಯನ್ ಶೂಟಿಂಗ್ ಚಾಂಪಿಯನ್‍ಶಿಪ್‍ನ ಅಂತಿಮ ದಿನ 2 ಪದಕಗಳನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 

ಆ ಮೂಲಕ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಪದಕದ ಸಂಖ್ಯೆ 44ಕ್ಕೆ ಏರಿದೆ. 25 ಮೀ. ಸೆಂಟರ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ವಿಜಯ್ ಕಂಚಿನ ಪದಕ ಪಡೆದರೆ, ತಂಡದ ವಿಭಾಗದಲ್ಲಿ ಹಿರಿಯ ಶೂಟರ್ ಸಮರೇಶ್ ಜಂಗ್ ಮತ್ತು ಪೆಂಬಾತಮಂಗ್ ಜತೆಗೂಡಿ ಬೆಳ್ಳಿ ಪದಕ ಪಡೆಯುವಲ್ಲಿ ಯಶಸ್ವಿಯಾದರು. 
ಈ ಮೂಲಕ ಭಾರತ ಟೂರ್ನಿಯ ಅಂತಿಮ ದಿನ 17 ಚಿನ್ನ, 14 ಬೆಳ್ಳಿ ಮತ್ತು 13 ಕಂಚಿನ ಪದಕ ಪಡೆಯುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com