ಐಎಎಎಫ್ ವಿರುದ್ಧ ಎಲೆನಾ ಗರಂ

ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದವರನ್ನು ರಕ್ಷಿಸಲಾಗಿದೆ ಎಂದು ರಷ್ಯಾವನ್ನು ತಾತ್ಕಾಲಿಕವಾಗಿ ರಿಯೋ ಒಲಿಂಪಿಕ್ಸ್ ನಿಂದ ವಜಾಗೊಳಿಸಿರುವ...
ಎಲೆನಾ ಬಯೇವಾ
ಎಲೆನಾ ಬಯೇವಾ
ಮಾಸ್ಕೊ: ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದವರನ್ನು ರಕ್ಷಿಸಲಾಗಿದೆ ಎಂದು ರಷ್ಯಾವನ್ನು ತಾತ್ಕಾಲಿಕವಾಗಿ ರಿಯೋ ಒಲಿಂಪಿಕ್ಸ್ ನಿಂದ ವಜಾಗೊಳಿಸಿರುವ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸಂಸ್ಥೆ ಒಕ್ಕೂಟದ ನಿರ್ಧಾರ ಸಂಪೂರ್ಣವಾಗಿ ಅಥ್ಲೀಟ್‍ಗಳ ಪಾಲಿಗೆ ಅನ್ಯಾಯವೆಸಗಿದೆ ಎಂದು ರಷ್ಯಾದ ಹೆಸರಾಂತ ಪೋಲ್ ವಾಲ್ಟ್ ತಾರೆ ಎಲೆನಾ ಬಯೇವಾ ಅಳಲು ತೋಡಿಕೊಂಡಿದ್ದಾರೆ. 'ಯಾರೋ ಅಪ್ರಾಮಾಣಿಕರು ಬೇಜವಾಬ್ದಾರಿಯಿಂದ ವರ್ತಿಸಿ ಮೋಸವೆಸಗಿದರೆ, ನನ್ನಂತಹ ಪ್ರಾಮಾಣಿಕ ಅಥ್ಲೀಟ್ ಗಳು ಶಿಕ್ಷೆ ಏಕೆ ಅನುಭವಿ ಸಬೇಕು'' ಎಂದು ಇಸಿನ್ ಬಯೋವಾ ಪ್ರಶ್ನಿಸಿದ್ದಾರೆ. ಐಎಎಎಫ್ ನ ಈ ನಿರ್ಧಾರ ಸಂಪೂರ್ಣ ಅಚ್ಚರಿ ತಂದಿದ್ದು, ಇದೊಂದು ಅನ್ಯಾಯದ ನಿರ್ಧಾರ'' ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com