ಗುಂಪು ಹಂತದಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ತಂಡ, ಮೊದಲಿಗೆ ಜಪಾನ್ ವಿರುದ್ಧ (2-1), ಆತಿಥೇಯ ಮಲೇಷಿಯಾ ವಿರುದ್ಧ (5-4) ಹಾಗೂ ಚೀನಾ ವಿರುದ್ಧ 4-1 ಗೋಲುಗಳಿಂದ ಜಯ ಸಾಧಿಸಿದ್ದ ಭಾರತ, ಕ್ವಾರ್ಟರ್ ಫೈನಲ್‍ನಲ್ಲಂತೂ ಓಮನ್ ವಿರುದ್ಧ 9-0 ಗೋಲುಗಳಿಂದ ವಿಜೃಂಬಿಸಿತ್ತು. ನಾಯಕ ಹರ್ಜೀತ್ ಸಿಂಗ್ ತಂಡವನ್ನು ಅಮೋಘವಾಗಿ ಮುನ್ನಡೆಸುತ್ತಿದ್ದು, ತಂಡ ಫೈನಲ್ ತಲುಪುವ ಭಾರೀ ಭರವಸೆಯಲ್ಲಿದೆ.