ಐಪಿಎಲ್ ಗೆ ಚೆಟ್ಟಿನಾಡ್, ಗೋಯೆಂಕಾ?

ಚೆಟ್ಟಿನಾಡ್ ಸಿಮೆಂಟ್ಸ್ ಹಾಗೂ ಗೋಯೆಂಕಾ ಸಹೋದರರು ಹೊಸ ಫ್ರಾಂಚೈಸಿಗಳ ಹಕ್ಕುಗಳನ್ನು ಖರೀದಿಸಲು ಮುಂದಾಗಿದ್ದಾರೆಂದು ಝೀ ನ್ಯೂಸ್ ಹೇಳಿದೆ.
ಐಪಿಎಲ್
ಐಪಿಎಲ್
Updated on

ನವದೆಹಲಿ: ಮುಂದಿನ ವರ್ಷದ ಐಪಿಎಲ್ ಟೂರ್ನಿಯಲ್ಲಿ ಎರಡು ಹೊಸ ಫ್ರಾಂಚೈಸಿಗಳಿಗೆ ಅವಕಾಶವಿರುವ ಹಿನ್ನೆಲೆಯಲ್ಲಿ, ಚೆಟ್ಟಿನಾಡ್ ಸಿಮೆಂಟ್ಸ್ ಹಾಗೂ ಗೋಯೆಂಕಾ ಸಹೋದರರು ಹೊಸ ಫ್ರಾಂಚೈಸಿಗಳ ಹಕ್ಕುಗಳನ್ನು ಖರೀದಿಸಲು ಮುಂದಾಗಿದ್ದಾರೆಂದು ಝೀ ನ್ಯೂಸ್ ಹೇಳಿದೆ.

ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್‍ರವರ ಕಡುವಿರೋಧಿಯೆಂದೇ ಗುರುತಿಸಲ್ಪಟ್ಟ ಎ.ಸಿ. ಮುತ್ತಯ್ಯ, ಚೆಟ್ಟಿನಾಡ್ ಸಿಮೆಂಟ್ಸ್ ಜತೆ ಕೈಜೋಡಿಸಿ, ಐಪಿಎಲ್ ತಂಡ ಖರೀದಿಗೆ ಮುಂದಾಗಿದ್ದಾರೆ ಎನ್ನಲಾಗಿದ್ದು, ಮತ್ತೊಂದು ತಂಡದ ಖರೀದಿಯಲ್ಲಿ ಗೋಯೆಂಕಾ ಸಹೋದರರ ಸಿಯೆಟ್ ಟೈರ್ಸ್ ಕಂಪನಿ ಮಾಲೀಕ ಹರ್ಷ, ಐಎಸ್ಎಲ್ ತಂಡ ಅಟೆಟಿಕೋ ಡಿ ಕೋಲ್ಕತ್ತಾದ ಸಹ ಮಾಲೀಕ ಸಂಜೀವ್ ಕೈ ಜೋಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com