ಬ್ರಿಟನ್‍ಗೆ ಡೇವಿಸ್ ಸಂಭ್ರಮ ತಂದ ಮರ್ರೆ

ವಿಶ್ವದ 2ನೇ ಶ್ರೇಯಾಂಕಿತ ಟೆನಿಸಿಗ ಆ್ಯಂಡಿ ಮರ್ರೆ ತಮ್ಮ ದೇಶ ಎದುರಿಸುತ್ತಿದ್ದ 79 ವರ್ಷಗಳ ಡೇವಿಸ್ ಕಪ್ ಪ್ರಶಸ್ತಿಯ ಬರವನ್ನು ನೀಗಿಸಿದ್ದಾರೆ...
ಆಂಡ್ಯಿ ಮರ್ರೆ
ಆಂಡ್ಯಿ ಮರ್ರೆ
Updated on: 
ಬೆಲ್ಜಿಯಂ: ವಿಶ್ವದ 2ನೇ ಶ್ರೇಯಾಂಕಿತ ಟೆನಿಸಿಗ ಆ್ಯಂಡಿ ಮರ್ರೆ ತಮ್ಮ ದೇಶ ಎದುರಿಸುತ್ತಿದ್ದ 79 ವರ್ಷಗಳ ಡೇವಿಸ್ ಕಪ್ ಪ್ರಶಸ್ತಿಯ ಬರವನ್ನು ನೀಗಿಸಿದ್ದಾರೆ. 
ಅರ್ಜೈಂಟೀನಾ ವಿರುದ್ಧ ಭಾನುವಾರ ನಡೆದ ಡೇವಿಸ್ ಕಪ್ ಫೈನಲ್ಸ್ ಟೂರ್ನಿಯ ಸಿಂಗಲ್ಸ್ ಪಂದ್ಯದಲ್ಲಿ ಎದುರಾಳಿ ಡೇವಿಡ್ ಗೋಪಿsನ್ ವಿರುದ್ಧ 6-3, 7-5, 6-3 ನೇರಸೆಟ್ ಗಳಲ್ಲಿ ಜಯ ಸಾಧಿಸಿದ ಮರ್ರೆ, ತಮ್ಮ ದೇಶಕ್ಕೆ ಪ್ರಶಸ್ತಿಯನ್ನು ತಂದುಕೊಟ್ಟರು. 
ಈ ಗೆಲವಿನೊಂದಿಗೆ, ಅರ್ಜೆಂಟೀನಾ ವಿರುದ್ಧದ ಐದು ಪಂದ್ಯಗಳ ಮುಖಾಮುಖಿಯಲ್ಲಿ ಇದೀಗ ಬ್ರಿಟನ್ 4-1ರ ಮುನ್ನಡೆ ಪಡೆಯುವ ಮೂಲಕ, ಬ್ರಿಟನ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಗೋಫಿನ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದಿದ್ದ ಡಬಲ್ಸ್ ಪಂದ್ಯದಲ್ಲಿ ಬ್ರಿಟನ್ ತಂಡದ ಆ್ಯಂಡಿ ಮರ್ರೆ ಹಾಗೂ ಜ್ಯಾಮಿ ಮರ್ರೆ ವಿರುದ್ಧ ಅರ್ಜೈಂಟೀನಾದ ಸ್ಟೀವ್ ಡಾರ್ಸಿಸ್ ಹಾಗೂ ಡೇವಿಡ್ ಗೊಫಿನ್ ಸೆಣಸಿದ್ದರು. 
ಈ ಪಂದ್ಯದಲ್ಲಿ ಮಿಂಚಿನ ಆಟವಾಡಿದ ಮರ್ರೆ ಸಹೋದರರು, ಪಂದ್ಯವನ್ನು 6-4, 4-6, 6-3, 6-2 ಸೆಟ್‍ಗಳ ಅಂತರದಲ್ಲಿ ಜಯಸಿದರು. ಶುಕ್ರವಾರ ನಡೆದಿದ್ದ ಟೂರ್ನಿಯ ಮೊದಲ ದಿನ ಆರಂಭಿಕ ಪಂದ್ಯದಲ್ಲಿ ಬ್ರಿಟನ್ ಹಿನ್ನಡೆ ಅನುಭವಿಸಿತ್ತು. ಬ್ರಿಟನ್‍ನ ಎಡ್ಮಂಡ್ ಅವರು, ಗೊಫಿನ್ ವಿರುದ್ಧ ಸೋಲು ಅನುಭವಿದ್ದರಿಂದ ಅರ್ಜೆಂಟೀನಾಕ್ಕೆ ಒಂದು ಅಂಕ ಲಭಿಸಿತ್ತು. ಆದರೆ, ಆನಂತರದ ಎಲ್ಲಾ ಪಂದ್ಯಗಳಲ್ಲೂ ಬ್ರಿಟನ್ ಜಯಭೇರಿ ಬಾರಿಸಿತು. 
ಶುಕ್ರವಾರ ನಡೆದಿದ್ದ 2ನೇ ಪಂದ್ಯದಲ್ಲಿ ಆ್ಯಂಡಿ ಮರ್ರೆ ಅವರು, ಬೆಮಲ್‍ಮನ್ಸ್ ವಿರುದ್ಧ ಜಯ ಸಾಧಿಸಿ ಬ್ರಿಟನ್‍ನ ಅಂಕದ ಖಾತೆ ತೆರೆದಿದ್ದರು. ಇದೀಗ, ಶನಿವಾರದ ಎರಡೂ ಮುಖಾಮುಖಿಗಳಲ್ಲಿ ಬ್ರಿಟನ್ ಜಯ ಸಾಧಿಸಿದ್ದರಿಂದ ಒಟ್ಟಾರೆಯಾಗಿ 3-1 ಅಂಕಗಳ ಮುನ್ನಡೆ ಪಡೆಯುವ ಮೂಲಕ ಬ್ರಿಟನ್ ಪ್ರಶಸ್ತಿಗೆ ಭಾಜನವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com