ಸಾನಿಯಾ-ಹಿಂಗಿಸ್‍ಗೆ ಡಬಲ್ಸ್ ಪ್ರಶಸ್ತಿ

ವಿಶ್ವದ ಅಗ್ರಶ್ರೇಯಾಂಕಿತ ಮಹಿಳಾ ಡಬಲ್ಸ್ ಟೆನಿಸ್ ಜೋಡಿಯಾದ ಭಾರತದ ಸಾನಿಯಾಮಿರ್ಜಾ ಹಾಗೂ ಸ್ವಿಜರ್ಲೆಂಡ್‍ನ ಮಾರ್ಟಿನಾ ಹಿಂಗಿಸ್...
ಸಾನಿಯಾಮಿರ್ಜಾ-ಮಾರ್ಟಿನಾ ಹಿಂಗಿಸ್
ಸಾನಿಯಾಮಿರ್ಜಾ-ಮಾರ್ಟಿನಾ ಹಿಂಗಿಸ್
Updated on: 
 ಬೀಜಿಂಗ್:  ವಿಶ್ವದ ಅಗ್ರಶ್ರೇಯಾಂಕಿತ ಮಹಿಳಾ ಡಬಲ್ಸ್ ಟೆನಿಸ್ ಜೋಡಿಯಾದ ಭಾರತದ ಸಾನಿಯಾಮಿರ್ಜಾ ಹಾಗೂ ಸ್ವಿಜರ್ಲೆಂಡ್‍ನ ಮಾರ್ಟಿನಾ ಹಿಂಗಿಸ್ ಅವರ ಜೈತ್ರಯಾತ್ರೆ ಚೀನಾದಲ್ಲೂ ಮುಂದುವರಿದಿದೆ. ಶನಿವಾರ ನಡೆದ ಚೀನಾ ಓಪನ್ ಮಹಿಳೆಯರ ಡಬಲ್ಸ್ ವಿಭಾಗದ ಫೈ ನಲ್‍ನಲ್ಲಿ ಸಾನಿಯಾ-ಹಿಂಗಿಸ್ ಜೋಡಿ, ಚೈನೀಸ್ ತೈಪೇನ
ಜೋಡಿಯಾದ ಹವೊ- ಚಿಂಗ್ ಚಾನ್ ಹಾಗೂ ಯಂಗ್-ಜಾನ್ ಚಾನ್ ವಿರುದ್ಧ 6-7 (9-11),6-1, 10-8 ಸೆಟ್‍ಗಳ ಅಂತರದಲ್ಲಿ ಜಯ ಸಾಧಿಸುವ ಮೂಲಕ ಪ್ರಶಸ್ತಿಗೆ ಭಾಜನವಾಯಿತು. ಪಂದ್ಯದ ಆರಂಭಿಕ ಸೆಟ್ ಎರಡೂ ಜೋಡಿಗಳ ತೀವ್ರ ಹೋರಾಟದಿಂದ ಟೈ ಬ್ರೇಕರ್ ಗೆ ಬಂದು ನಿಂತಿತು. ನಂತರ ಮುಂದುವರಿದ ಆಟದಲ್ಲಿ ತೈಪೇ ಜೋಡಿಯೇ ಗೆಲವು ದಾಖಲಿಸಿತು.ಆದರೆ, ನಂತರ ಎರಡೂ ಸೆಟ್‍ಗಳಲ್ಲಿ  ಉತ್ತಮ ಪ್ರದರ್ಶನ ತೋರಿದ ಸಾನಿಯಾ-ಹಿಂಗಿಸ್, ಎದುರಾಳಿಗಳನ್ನು ಮಣಿಸುವಲ್ಲಿ ಯಶಸ್ವಿಯಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com