37 ವರ್ಷದ ಜಹೀರ್ ಖಾನ್ ಇತ್ತೀಚಿನ ವರ್ಷಗಳಲ್ಲಿ ಸತತವಾಗಿ ಗಾಯದ ಸೆಳವಿಗೆ ಸಿಲುಕಿ ಜರ್ಜರಿತರಾಗಿದ್ದರಲ್ಲದೆ, ತಮ್ಮ ಬೌಲಿಂಗ್‍ನಲ್ಲಿ ಮೊದಲಿನ ಮೊನಚು ಕಳೆದುಕೊಂಡಿದ್ದರು. ಭಾರತದ ಪರ 92 ಟೆಸ್ಟ್ , 200 ಏಕದಿನ ಹಾಗೂ 17 ಚುಟುಕು ಪಂದ್ಯಗಳಿಂದ ಒಟ್ಟಾರೆ 610 ವಿಕೆಟ್ ಪಡೆದಿರುವ ಅವರು, ಮುಂದಿನ ವರ್ಷ ನಡೆಯಲಿರುವ 9ನೇ ಐಪಿಎಲ್ ಪಂದ್ಯಾವಳಿಯೊಂದಿಗೆ ಸಕ್ರಿಯ ಕ್ರಿಕೆಟ್‍ಗೆ ಸಂಪೂರ್ಣ ವಿದಾಯ ಹೇಳುವುದಾಗಿ ಮುಂತಿಳಿಸಿದ್ದಾರೆ.