ಅಗ್ರ 100ರಲ್ಲಿ ಯೂಕಿ ಭಾಂಬ್ರಿ

ಭಾರತದ ಭರವೆಸೆಯ ಟೆನಿಸ್ ಆಟಗಾರ ಯೂಕಿ ಭಾಂಬ್ರಿ ವಿಶ್ವ ರ್ಯಾಂಕಿಂಗ್‍ನಲ್ಲಿ ಅಗ್ರ 100 ಸ್ಥಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ...
ಯೂಕಿ ಭಾಂಬ್ರಿ
ಯೂಕಿ ಭಾಂಬ್ರಿ
Updated on
ಟಶ್‍ಕೆಂಟ್: ಭಾರತದ ಭರವೆಸೆಯ ಟೆನಿಸ್ ಆಟಗಾರ ಯೂಕಿ ಭಾಂಬ್ರಿ ವಿಶ್ವ ರ್ಯಾಂಕಿಂಗ್‍ನಲ್ಲಿ ಅಗ್ರ 100 ಸ್ಥಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 
ಗುರುವಾರ ಎಟಿಪಿ ಟಶ್‍ಕೆಂಟ್ ಚಾಲೆಂಜರ್‍ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಯೂಕಿ ಭಾಂಬ್ರಿ ಅಗ್ರ 100ರಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಯೂಕಿ ಭಾಂಬ್ರಿ ಕ್ರೊವೇಶಿಯಾದ ನಿಕೊಲ ಮೆಕ್‍ಟಿಕ್ ವಿರುದ್ಧ 6-3, 1-6, 6-1 ಸೆಟ್‍ಗಳ ಅಂತರದಲ್ಲಿ ಜಯ ಸಾಧಿಸಿದರು. 
ಪ್ರಸಕ್ತ 105ನೇ ಸ್ಥಾನದಲ್ಲಿರುವ ಯೂಕಿ, ಸೋಮವಾರ ಬಿಡುಗಡೆಯಾಗಲಿರುವ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಬಡ್ತಿ ಪಡೆಯಲಿದ್ದು, 2010 ರ ನಂತರ ಅಗ್ರ ನೂರರಲ್ಲಿ ಕಾಣಿಸಿಕೊಳ್ಳಲಿರುವ ಮೊದಲ ಆಟಗಾರನಾಗಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com