ಇದೇ ವೇಳೆ ಶಿವಸೇನೆ ಕೃತ್ಯವನ್ನು ಖಂಡಿಸಿರುವ ಅನೂರಾಗ್ ಠಾಕೂರ್, ಮಹತ್ವದ ಸಭೆಗಳು ನಡೆಸುವ ಸಂದರ್ಭಗಳಲ್ಲಿ ವಿನಾಃ ಕಾರಣ ದಾಂದಲೆ ನಡೆಸಿ, ಸಭೆಗಳನ್ನು ರದ್ದುಪಡಿಸುವಂತೆ ಆದೇಶಿಸುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದ್ದು, ಪ್ರತಿಭಟನೆಗಳನ್ನು ನಡೆಸಬೇಕೆಂದರೇ ರಸ್ತೆಗಳಲ್ಲಿ ನಡೆಸಬೇಕೆ ಹೊರತು ಮನೆ, ಕೇಂದ್ರ ಕಚೇರಿಗಳಿಗೆ ನುಗ್ಗಿ ದಾಂದಲೆ ನಡೆಸಬಾರದು ಎಂದು ಹೇಳಿದ್ದಾರೆ.