

ಲಂಡನ್: ಇತ್ತೀಚೆಗಷ್ಟೇ ನಡೆದ ತಮ್ಮ ಮೊದಲ ವೃತ್ತಿಪರ ಬಾಕ್ಸಿಂಗ್ ಪಂದ್ಯದಲ್ಲಿ ಬ್ರಿಟನ್‍ನ ಸೋನಿ ವೈಟಿಂಗ್ ಅವರನ್ನು ಸೋಲಿಸಿದ್ದ ಭಾರತದ ಹೆಸರಾಂತ ಬಾಕ್ಸರ್ ವಿಜೇಂದರ್ ಸಿಂಗ್, ಅ. 30ರಂದು ನಡೆಯಲಿರುವ ತಮ್ಮ 2ನೇ ಬಾಕ್ಸಿಂಗ್ ಸೆಣಸಾಟದಲ್ಲಿ ಇಂಗ್ಲೆಂಡ್‍ನ ಮತ್ತೋರ್ವ ಬಾಕ್ಸರ್ ಡೀನ್ ಗಿಲ್ಲೆನ್ ವಿರುದ್ಧ ಸೆಣಸಲಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.