ಕ್ರೀಡೆ

ಸಚಿನ್‌ಗೆ ದ್ವಿಶತಕ, ತ್ರಿಶಕ ಬಾರಿಸುವುದು ಗೊತ್ತಿಲ್ಲ: ಕಪಿಲ್ ದೇವ್

ಸಚಿನ್‌ಗೆ ದ್ವಿಶತಕ, ತ್ರಿಶಕ ಬಾರಿಸುವುದು ಗೊತ್ತಿಲ್ಲ: ಕಪಿಲ್ ದೇವ್
ಕಪಿಲ್ ದೇವ್
Published On :
ದುಬೈ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ದ್ವಿಶತಕ, ತ್ರಿಶತಕ ಬಾರಿಸುವುದು ಹೇಗೆ ಅಂತ ಗೊತ್ತಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.
ಸಚಿನ್‌ಗೆ ದ್ವಿಶತಕ, ತ್ರಿಶತಕ ಬಾರಿಸಲು ಬರುವುದಿಲ್ಲ ಎಂದು ನಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಸಚಿನ್ ತಮ್ಮ ಸಾಮರ್ಥ್ಯ, ಕೌಶಲ್ಯವನ್ನು ಚೆನ್ನಾಗಿ ಬಳಸಿಕೊಂಡಿಲ್ಲ. ಅವರೀಗ ಸಾಧನೆ ಮಾಡಿದ್ದಕ್ಕಿಂತ ಹೆಚ್ಚಿನದನ್ನು ಮಾಡಲು ಅವರಿಗೆ ಸಾಧ್ಯವಾಗುತ್ತಿತ್ತು ಎಂದು ಕಪಿಲ್ ಅಭಿಪ್ರಾಯಪಟ್ಟಿದ್ದಾರೆ.
ಸಚಿನ್ ಮುಂಬೈ ಕ್ರಿಕೆಟ್‌ನಲ್ಲೇ ಸ್ಥಗಿತರಾದಂತೆ ಇದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ಇನ್ನೂ ಮಿಂಚಬಹುದಾಗಿತ್ತು. ನೀಟ್ ಆ್ಯಂಡ್ ಸ್ಟ್ರೈಟ್ ಕ್ರಿಕೆಟ್ ಆಡುವ ಮುಂಬೈ ಕ್ರಿಕೆಟಿಗರ ಜತೆ ಆಡುವುದಕ್ಕಿಂತ ಹೆಚ್ಚು ಸಮಯವನ್ನು ಅವರು ವಿವಿಯನ್ ರಿಚರ್ಡ್ಸ್ ಜತೆ ಆಟವಾಡುತ್ತಾ ಕಳೆಯಬೇಕಿತ್ತು.  ಸಚಿನ್ ಅದ್ಭುತ ಕ್ರಿಕೆಟಿಗ, ಅವರಿಗೆ ಶತಕ ಬಾರಿಸುವುದು ಹೇಗೆ ಎಂದು ಗೊತ್ತು. ಆದರೆ ದ್ವಿಶತಕ, ತ್ರಿಶತಕ ಅಥವಾ ನಾನ್ನೂರು ರನ್ ಹೇಗೆ ಬಾರಿಸಬೇಕೆಂದು ತಿಳಿದಿಲ್ಲ ಎಂದು ಕಪಿಲ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.