

ದೆಹಲಿ: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸ್ಕೀಂ ಆಯ್ಕೆ ಸಮಿತಿಯಿಂದ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ಹೊರ ಬಂದಿದ್ದಾರೆ.
ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಇನ್ನಷ್ಟು ಉತ್ತಮ ಪ್ರದರ್ಶನ ತೊರಬೇಕೆನ್ನುವ ಉದ್ದೇಶದಿಂದ ‘ಟಾರ್ಗೆಟ್ ಒಲಿಂಪಿಕ್ಸ್ ಪೊಡಿಯಂ (ಟಾಪ್)’ ಸಮಿತಿಗೆ ರಾಜೀನಾಮೆ ನೀಡಿರುವುದಾಗಿ ಅವರು ಹೇಳಿದ್ದಾರೆ,
ಈ ಸಂಬಂಧ ಟ್ವಿಟರ್ನಲ್ಲಿ ರಾಜೀನಾಮೆ ನೀಡಿರುವ ಕುರಿತು ಮಾಹಿತಿ ಪ್ರಕಟಿಸಿರುವ ಅಭಿನವ್ ಬಿಂದ್ರಾ, ನಿರೀಕ್ಷೆಯ ಮಟ್ಟಕ್ಕೆ ಸಾಧಿಸಲು ಸಾಧ್ಯವಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಯೊಜನೆಗಳು ಕ್ರೀಡಾಪಟುಗಳ ಸ್ನೇಹಿಯಾಗಿರಬೇಕು. ಕೇವಲ ಕಡತದಲ್ಲಿರುವಂತೆ ಆಗಬಾರದೆನ್ನುವ ವಾದ ಮುಂದಿಟ್ಟಿರುವ ಅಭಿನವ್ ಬಿಂದ್ರಾ, ಸಮಿತಿಯಲ್ಲಿದ್ದುಕೊಂಡು ಈಗಿನ ವ್ಯವಸ್ಥೆಯಲ್ಲಿ ನಿರೀಕ್ಷೆಯ ಮಟ್ಟಕ್ಕೆ ಸಾಧಿಸಲು ಸಾಧ್ಯವಾಗದೇ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಮುಂಬರುವ ಒಲಿಂಪಿಕ್ ಕ್ರೀಡಾಕೂಟ ಗುರಿಯಾಗಿಸಿಕೊಂಡು ಪ್ರತಿಭಾವಂತರನ್ನು ಗುರುತಿಸಿ, ಅವರಿಗೆ ಸೂಕ್ತ ತರಬೇತಿ ಸಿಗುವಂತೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.