ಯುಎಸ್ ಓಪನ್ ಟೆನಿಸ್ ಟೂರ್ನಿ: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾನಿಯಾ- ಮಾರ್ಟಿನಾ ಜೋಡಿ

ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಯುಎಸ್ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.
ಸಾನಿಯಾ ಮಿರ್ಜಾ- ಮಾರ್ಟಿನಾ ಹಿಂಗಿಸ್
ಸಾನಿಯಾ ಮಿರ್ಜಾ- ಮಾರ್ಟಿನಾ ಹಿಂಗಿಸ್

ನ್ಯೂಯಾರ್ಕ್: ಸಾನಿಯಾ ಮಿರ್ಜಾ- ಮಾರ್ಟಿನಾ ಹಿಂಗಿಸ್ ಯುಎಸ್ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.

ಭಾರತ- ಸ್ವೀಡನ್ ಆಟಗಾರ್ತಿಯರು ವಿರೋಧಿ ಆಟಗಾರರನ್ನು  6 -3 , 6 -0 ಸೆಟ್ ಗಳಿಂದ(59 ನಿಮಿಷಗಳಲ್ಲಿ) ಮಣಿಸಿದ್ದಾರೆ. ಪ್ರಾರಂಭದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಸಾನಿಯಾ- ಹಿಂಗಿಸ್ ಜೋಡಿ, ಕ್ರಜಿಸೆಕ್, ಸ್ಟ್ರೇಕೋವಾ ಜೋಡಿಯನ್ನು ಮೊದಲ ಸೆಟ್ ನಲ್ಲಿ ಸೋಲಿಸಿದೆ.  

ಎರಡನೇ ಸೆಟ್ ನಲ್ಲೂ ಸಾನಿಯಾ- ಮಾರ್ಟಿನಾ ಜೋಡಿ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಅಂತಿಮವಾಗಿ 6 -3 , 6 -0 ಸೆಟ್ ಅಂತರದಲ್ಲಿ ಡಚ್- ಜೆಕ್ ಜೋಡಿ ಸೋಲನುಭವಿಸಿದೆ. ಕ್ವಾರ್ಟರ್ ಫೈನಲ್ ನಲ್ಲಿ ಸಾನಿಯಾ ಹಾಗೂ ಮಾರ್ಟಿನಾ ಹಿಂಗಿಸ್   ಚಾನ್ ಯುಂಗ್-ಜಾನ್ ಮತ್ತು ಚಾನ್ ಹಾವೊ-ಚಿಂಗ್ ಜೋಡಿಯನ್ನು ಎದುರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com