ಸೆಮಿಫೈನಲ್ ಸುತ್ತಿಗೆ ಯೂಕಿ ಪ್ರವೇಶ

ಆಕರ್ಷಕ ಪ್ರದರ್ಶನವನ್ನು ಮುಂದುವರಿಸಿರುವ ಭಾರತದ ಯುವ ಟೆನ್ನಿಸಿಗ ಯೂಕಿ ಭಾಂಬ್ರಿ 50. 000 ಡಾಲರ್ ಬಹುಮಾನ...
ಯೂಕಿ ಭಾಂಬ್ರಿ
ಯೂಕಿ ಭಾಂಬ್ರಿ

ಶಾಂಘೈ: ಆಕರ್ಷಕ ಪ್ರದರ್ಶನವನ್ನು ಮುಂದುವರಿಸಿರುವ ಭಾರತದ ಯುವ ಟೆನ್ನಿಸಿಗ ಯೂಕಿ ಭಾಂಬ್ರಿ 50. 000 ಡಾಲರ್ ಬಹುಮಾನ ಮೊತ್ತದ ಎಟಿಪಿ ಚಾಲೆಂಜರ್ ಪಂದ್ಯಾವಳಿಯಲ್ಲಿ  ಸೆಮಿಫೈನಲ್  ತಲುಪಿದ್ದಾರೆ.

ನಾಲ್ಕನೇ ಶ್ರೇಯಾಂಕಿತ ಆಟಗಾರ ಯೂಕಿ ಬಾಂಬ್ರಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಜೋರ್ಡನ್ ಥಾಂಪ್ಸನ್ ವಿರುದ್ಧ 6-2, 6-2ರ ನೇರ ಸೆಟ್ ಗಳಲ್ಲಿ ಗೆಲುವು ಪಡೆದು ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದರು.

ಸುಮಾರು ಒಂದು ತಾಸು 11ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ  ಭಾಂಬ್ರಿ ಎರಡೂ ಸೆಟ್ ಗಳಲ್ಲಿ ಮೇಲುಗೈ ಮೆರೆದರು. ಫೈನಲ್ ಸುತ್ತಿಗೆ ಪ್ರವೇಶ ಪಡೆಯಲು ಸೆಮಿಫೈನಲ್ ನಲ್ಲಿ ರಷ್ಯದ ಅರ್ಹತಾ ಆಟಗಾರ ಡೇನಿಲ್  ಮೆಡ್ವೆದೇವ್  ವಿರುದ್ಧದ ಪಂದ್ಯದಲ್ಲಿ ಯೂಕಿ ಗೆಲುವು ಪಡೆಯಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com