ರಾಷ್ಟ್ರೀಯ ಶೂಟರ್ ಸಿಪ್ಪಿ ಸಿಧು ಕೊಲೆ

ಭಾರತದ ರಾಷ್ಟ್ರೀಯ ಮಟ್ಟದ ಶೂಟರ್ ಸಿಪ್ಪಿ ಸಿಧು ಅವರನ್ನು ಭಾನುವಾರ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಕೊಲೆ ಮಾಡಲಾಗಿದೆ...
ಸಿಪ್ಪಿ ಸಿಧು
ಸಿಪ್ಪಿ ಸಿಧು

ಚಂಡೀಗಢ: ಭಾರತದ ರಾಷ್ಟ್ರೀಯ ಮಟ್ಟದ ಶೂಟರ್ ಸಿಪ್ಪಿ ಸಿಧು ಅವರನ್ನು ಭಾನುವಾರ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಕೊಲೆ ಮಾಡಲಾಗಿದೆ. ಸೋಮವಾರ ಬೆಳಗ್ಗೆ ಇಲ್ಲಿನ ಪಾರ್ಕ್ ಒಂದರಲ್ಲಿ ಸಿಧು ಅವರ ದೇಹ ಪತ್ತೆಯಾಗಿದೆ.

ಬೆಳಗಿನ ಜಾವ ಸ್ಥಳೀಯರು ಪಾರ್ಕ್ ನಲ್ಲಿ ಮೃತದೇಹ ಇರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ತನಿಖೆ ನಡೆಸಿ ಮೃತ ದೇಹ ಸಿಪ್ಪಿ ಸಿಧು ಅವರದು ಎಂದು ಪತ್ತೆ ಹ್ಹಚಾಲಿಯು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಹತ್ಯೆಗೆ ಕಾರಣ ಇನ್ನು ತಿಳಿದು ಬಂದಿಲ್ಲ.

ಇದೊಂದು ಕೊಲೆ ಪ್ರಕರಣವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಚಂಡೀಗಢ ಎಸ್‍ಎಸ್‍ಪಿ ಸುಖ್‍ಚೈನ್ ಸಿಂಗ್ ಗಿಲ್ ತಿಳಿಸಿದ್ದಾರೆ. ಸಿಪ್ಪಿ ರೈಫಲ್ ಶೂಟರ್ ಆಗಿದ್ದು ತಂಡಗಳ ಸ್ಪರ್ಧೆಯಲ್ಲಿ ಅಭಿನವ್ ಬಿಂದ್ರಾ ಜತೆಗೆ ಪಂಜಾಬ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದಿದ್ದರು.

ಕಳೆದ 15 ವರ್ಷಗಳಿಂದ ಶೂಟಿಂಗ್‍ನಲ್ಲಿ ತೊಡಗಿಸಿಕೊಂಡಿದ್ದರು ಎಂದು ಎನ್‍ಆರ್‍ಎಐ ಕಾರ್ಯದರ್ಶಿ ರಾಜೀವ್ ಭಾಟಿಯಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com