ಸಲಿಂಗಿಗಳ ಪ್ರೇಮ ನಿವೇದನೆಗೆ ಸಾಕ್ಷಿಯಾದ ಸಾಂಬಾ ಕ್ರೀಡಾಕೂಟ

ಬ್ರೆಜಿಲ್ ಮಹಿಳಾ ರಗ್ಬಿ ಸೆವೆನ್ಸ್ ತಂಡದ ಆಟಗಾರ್ತಿ ಇಸಾಡೊರಾ ಸೆರುಲ್ಲೊ ಅವರಿಗೆ ಡಿಯಾಂಡ್ರೊ ಸ್ಟೇಡಿಯಂ ಮ್ಯಾನೇಜರ್ ಮರ್ಜೋರಿ ಎನ್ಯಾ ಎಂಬಾಕೆ...
ಸಲೀಂಗಿ ಗೆಳತಿಯರು
ಸಲೀಂಗಿ ಗೆಳತಿಯರು

ರಿಯೋ ಡಿ ಜರೈನೋ: ಬ್ರೆಜಿಲ್ ಮಹಿಳಾ ರಗ್ಬಿ ಸೆವೆನ್ಸ್ ತಂಡದ ಆಟಗಾರ್ತಿ ಇಸಾಡೊರಾ ಸೆರುಲ್ಲೊ ಅವರಿಗೆ ಡಿಯಾಂಡ್ರೊ ಸ್ಟೇಡಿಯಂ ಮ್ಯಾನೇಜರ್ ಮರ್ಜೋರಿ ಎನ್ಯಾ ಎಂಬಾಕೆ ಪ್ರಪೋಸ್ ಮಾಡಿದ್ದು ಸಲಿಂಗಿಗಳ ಪ್ರೇಮಕ್ಕೆ ಸಾಂಬಾ ಕ್ರೀಡಾಕೂಟ ಸಾಕ್ಷಿಯಾಗಿದೆ.

ಬ್ರೆಜಿಲ್ ಆಟಗಾರ್ತಿಯರು ಮೈದಾನದಲ್ಲಿದ್ದಾಗ 28 ವರ್ಷದ ಮರ್ಜೋರೀ ಮೈಕ್ರೋಫೋನ್ ನಲ್ಲಿ ಭಾವನಾತ್ಮಕ ಮಾತುಗಳ ಮೂಲಕ 24 ವರ್ಷದ ಇಸಾಡೊರಾಗೆ ಪ್ರಪೋಸ್ ಮಾಡಿದರು. ಇದನ್ನು ಕೇಳಿದ ಇಸಾಡೋ ಪರಸ್ಪರ ಚುಂಬಿಸಿಕೊಳ್ಳುವ ಮೂಲಕ ವಿವಾಹ ನಿವೇದನೆಯನ್ನು ಸಮ್ಮತಿಸಿದರು. ಕಳೆದ 2 ವರ್ಷಗಳಿಂದ ಈ ಇಬ್ಬರು ಪರಿಚಯಸ್ಥರಾಗಿದ್ದರು.

ಬ್ರೆಜಿಲ್ ನಲ್ಲಿ 2013 ರಿಂದಲೇ ಸಲೀಂಗ ವಿವಾಹಕ್ಕೆ ಕಾನೂನು ಸಮ್ಮತಿ ಇರುವುದರಿಂದ ಇಂಥ ವಿವಾಹ ಇಲ್ಲಿ ಸಾಮಾನ್ಯವಾಗಿದೆ. ರಿಯೋ ಗೇಮ್ಸ್ ನಲ್ಲಿ ಸುಮಾರು 45ರಷ್ಟು ಸಲಿಂಗಿ, ದ್ವಿಲಿಂಗಿ, ತೃತೀಯ ಲಿಂಗಿ ಕ್ರೀಡಾಪಟುಗಳು ಸ್ಪರ್ಧೆಯಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com