ತಪ್ಪು ಹೇಳಿಕೆಯಿಂದ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ ರಿಯೋ ಒಲಂಪಿಕ್ಸ್ ರಾಯಭಾರಿ ಸಲ್ಮಾನ್

ರಿಯೋ ಒಲಂಪಿಕ್ಸ್ 2016 ರ್ ಗುಡ್ ವಿಲ್ ರಾಯಭಾರಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಹೇಳಿಕೆಯಿಂದ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ..
ಸಲ್ಮಾನ್ ಖಾನ್
ಸಲ್ಮಾನ್ ಖಾನ್
Updated on: 

ನವದೆಹಲಿ: ರಿಯೋ ಒಲಂಪಿಕ್ಸ್ 2016 ರ್ ಗುಡ್ ವಿಲ್ ರಾಯಭಾರಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಹೇಳಿಕೆಯಿಂದ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಫ್ರೀಕಿ ಅಲಿ ಟ್ರೀಸರ್ ಬಿಡುಗಡೆಗೆ ಆಗಮಿಸಿದ್ದ ಸಲ್ಮಾನ್ ಖಾನ್ ರಿಯೋ ಒಲಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸದೇ ಮುಜುಗರಕ್ಕೊಳಗಾದ ಪ್ರಸಂಗ ನಡೆಯಿತು.

ರಿಯೋ ಒಲಂಪಿಕ್ಸ್ ನ ಜಿಮ್ನಾಸ್ಟಿಕ್ ನಲ್ಲಿ ದೀಪಿಕಾ ಫೈನಲ್ ಪ್ರವೇಶಿಸಿದ್ದಾರೆ. ಅವರು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಹೇಳಿದರು. ಸಲ್ಮಾನ್ ಖಾನ್ ತಪ್ಪು ಕಂಡು ಹಿಡಿದ ಪತ್ರಕರ್ತನೊಬ್ಬ ಆ ಕ್ರೀಡಾಪಟುವಿನ ಕರೆಕ್ಟ್ ಹೆಸರು ಹೇಳಿ ಎಂದು ಕೇಳಿದ್ದಾರೆ.. ಇದಕ್ಕೆ ಉತ್ತರಿಸಿದ ಸಲ್ಮಾನ್ , ಓ ಎಸ್ ..ದೀಪ್ತಿ ಎಂದು ಹೇಳಿದ್ದಾರೆ. ಎರಡನೇ ಬಾರಿಯೂ ಸಲ್ಮಾನ್ ಖಾನ್ ದೀಪಾ ಕರ್ಮಕರ್ ಅವರ ಹೆಸರು ಸರಿಯಾಗಿ ಹೇಳದೆ ಪೇಚಿಗೆ ಸಿಲುಕಿದರು.

ರಿಯೋ ಒಲಂಪಿಕ್ಸ್ ರಾಯಭಾರಿಯಾಗಿರುವವರಿಗೆ ಉತ್ತಮ ಪ್ರದರ್ಶನ ತೋರುತ್ತಿರುವ ಭಾರತೀಯ ಕ್ರೀಡಾಪಟುಗಳ ಹೆಸರನ್ನು ಸರಿಯಾಗಿ ತಿಳಿದುಕೊಂಡಿಲ್ಲ ಎಂದು ಪತ್ರಕರ್ತರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com