ಟೆಸ್ಟ್‌ನಲ್ಲಿ ಪಾಕ್‌ಗೆ ಅಗ್ರಸ್ಥಾನ: ಕೊಹ್ಲಿ ಕಿಚಾಯಿಸಿದ ಪಾಕ್ ಅಭಿಮಾನಿಗಳು

ಟೀಂ ಇಂಡಿಯಾ ಹಿಂದಿಕ್ಕಿ ಅಂತಾರಾಷ್ಟ್ರೀಯ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಪಾಕಿಸ್ತಾನ ಅಗ್ರಸ್ಥಾನಕ್ಕೇರುವುದರಿಂದ ಪಾಕ್ ಅಭಿಮಾನಿಗಳ ತಲೆ ತಿರುಗುವಂತಾಗಿದ್ದು ಭಾರತದ...
ಕುಚೋದ್ಯದ ಫೋಟೋಗಳು
ಕುಚೋದ್ಯದ ಫೋಟೋಗಳು

ಕರಾಚಿ: ಟೀಂ ಇಂಡಿಯಾ ಹಿಂದಿಕ್ಕಿ ಅಂತಾರಾಷ್ಟ್ರೀಯ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಪಾಕಿಸ್ತಾನ ಅಗ್ರಸ್ಥಾನಕ್ಕೇರುವುದರಿಂದ ಪಾಕ್ ಅಭಿಮಾನಿಗಳ ತಲೆ ತಿರುಗುವಂತಾಗಿದ್ದು ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿಯನ್ನು ಲೇವಡಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಇದೀಗ ಪಾಕ್ ಅಭಿಮಾನಿಗಳು ಟೆಸ್ಟ್ ಕ್ರಿಕೆಟ್ ನಲ್ಲಿ ತಾವೇ ಸಾರ್ವಭೌಮರಾದೆವೆಂಬುದನ್ನು ಸಾಂಕೇತಿಕವಾಗಿ ತೋರ್ಪಡಿಸಲು ಯಾವುದೋ ಸರ್ವಾಧಿಕಾರಿಯೊಬ್ಬ ಚಿನ್ನದ ಸಿಂಹಾಸದ ಮೇಲೆ ಕೂತಿರುವ ಚಿತ್ರವನ್ನು ತೆಗೆದುಕೊಂಡು ಅದಕ್ಕೆ ಟೆಸ್ಟ್ ತಂಡದ ನಾಯಕ ಮಿಸ್ಬಾ ಉಲ್ ಹಕ್ ಅವರ ಮುಖವನ್ನು ಹಚ್ಚಿದ್ದಾನೆ. ಇದರ ಜತೆಗೇ ಸಿಂಹಾಸನ ಪಕ್ಕ ನಿಂತಿರುವ ಭದ್ರತಾ ಸಿಬ್ಬಂದಿಯ ಮುಖಕ್ಕೆ ವಿರಾಟ್ ಕೊಹ್ಲಿ ಮುಖ ಅಂಟಿಸಿ ವಿಕೃತಿ ಮೆರೆದಿದ್ದಾನೆ.

ಇನ್ನೊಂದು ಫೋಟೋದಲ್ಲಿ ರೆಸ್ಲರ್ ಒಬ್ಬ ತನ್ನ ಪ್ರತಿಸ್ಪರ್ಧಿಯನ್ನು ಹೆಗಲ ಮೇಲೆ ಎತ್ತಿಕೊಂಡಿರುವ ಚಿತ್ರವನ್ನು ತೆಗೆದುಕೊಂಡು ರೆಸ್ಲರ್ ಮುಖಕ್ಕೆ ಮಿಸ್ಬಾ ಮುಖ ಅಂಟಿಸಿ, ಹೆಗಲ ಮೇಲಿನ ಪ್ರತಿಸ್ಪರ್ಧಿಗೆ ಕೊಹ್ಲಿ ಮುಖ ಅಂಟಿಸಿದ್ದಾರೆ. ಇಂತಹ ಹತ್ತಾರು ಕುಚೋದ್ಯದ ಚಿತ್ರಗಳನ್ನು ಅಪ್ ಲೋಡ್ ಮಾಡುವ ಮೂಲಕ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ವಿಚಿತ್ರ ಖುಷಿಪಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com