ಇಂದು ಲಂಕಾ ವಿರುದ್ಧ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ, ನಾಯಕ ಇಶಾನ್ ಕಿಷನ್ ಹಾಗೂ ರಿಶಭ್ ಪಂತ್ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ ಮಧ್ಯಮ ಕ್ರಮಾಂಕದ ಅನ್ಮೋಲ್ಪ್ರೀತ್ ಸಿಂಗ್ (72) ಹಾಗೂ ಸರ್ಫರಾಜ್ ಖಾನ್ (59) ತಂಡಕ್ಕೆ ನೆರವಾದರು. ಅಂತಿಮ ಓವರ್‌ಗಳಲ್ಲಿ ಅರ್ವನ್ ಜಾಫರ್ ಹಾಗೂ ಮಯಾಂಕ್ ದಾಗ್ರಾ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ನಿಗದಿತ ಓವರ್ಗೆ 267 ರನ್ ಭಾರಿಸಿತು.