ದಕ್ಷಿಣ ಏಷ್ಯಾ ಕ್ರೀಡಾಕೂಟ: ಶೂಟಿಂಗ್‌ ನಲ್ಲಿ ಭಾರತಕ್ಕೆ 25 ಚಿನ್ನದ ಪದಕ

12ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ಶೂಟರ್‌ಗಳಾದ ಗುರುಪ್ರೀತ್‌ ಮತ್ತು ಶ್ವೇತಾ ಚಿನ್ನ ಗೆದ್ದಿದ್ದಾರೆ. ಇದರೊಂದಿಗೆ ಶೂಟಿಂಗ್ ವಿಭಾಗದಲ್ಲಿ 26...
ಶೂಟಿಂಗ್
ಶೂಟಿಂಗ್
Updated on

ಗುವಾಹಟಿ/ಶಿಲ್ಲಾಂಗ್‌: 12ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತದ ಶೂಟರ್‌ಗಳಾದ ಗುರುಪ್ರೀತ್‌ ಮತ್ತು ಶ್ವೇತಾ ಚಿನ್ನ ಗೆದ್ದಿದ್ದಾರೆ. ಇದರೊಂದಿಗೆ ಶೂಟಿಂಗ್ ವಿಭಾಗದಲ್ಲಿ 26 ಚಿನ್ನದ ಪದಕಗಳಲ್ಲಿ 25 ಚಿನ್ನದ ಪದಕವು ಭಾರತ ಮಡಿಲಿಗೆ ಬಿದ್ದಿವೆ.

ಗುರುಪ್ರೀತ್‌ ಸಿಂಗ್‌ ಅವರು ವೈಯಕ್ತಿಕ 25ಎಂ ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನ ಗೆದ್ದರು. ಮಹಿಳೆಯರ 10ಎಂ ಏರ್ ಪಿಸ್ತೂಲ್‌ ವಿಭಾಗದಲ್ಲಿ  ಒಟ್ಟು 194.4 ಸ್ಕೋರ್‌ ಕಲೆ ಹಾಕಿ ಶ್ವೇತಾ ಸಿಂಗ್‌ ಪದಕ ಗೆದ್ದರು. ಮತ್ತೋರ್ವ ಒಲಿಂಪಿಯನ್‌ ಹೀನಾ ಸಿಂಧು ಮಹಿಳೆಯರ 10 ಎಂ ಏರ್‌ ಪಿಸ್ತೂಲ್‌ ಸ್ಫರ್ಧೆಯಲ್ಲಿ ಬೆಳ್ಳಿ ಮತ್ತು ಚಂಡಿಗಡದ ಯಶಸ್ವಿನಿ ಸಿಂಗ್‌ ದೇಸ್‌ವಾಲ್‌ ಕಂಚು ಗೆದ್ದರು.

ಭಾರತದ ಶೂಟರ್‌ಗಳು ಒಟ್ಟು 25 ಚಿನ್ನ, 10 ಬೆಳ್ಳಿ ಮತ್ತು 10 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com