ಸಚಿನ್-ಗಂಗೂಲಿಯಂತೆ ನನಗೂ ರೋಹಿತ್‌ಗೂ ಸುದೀರ್ಘ ವೃತ್ತಿಜೀವನ: ಧವನ್

ಪರಸ್ಪರ ತಿಳುವಳಿಕೆಯಿಂದ ಪಂದ್ಯದಿಂದ ಪಂದ್ಯಕ್ಕೆ ರೋಹಿತ್ ಶರ್ಮಾ ಹಾಗೂ ನನ್ನ ಆಟ ಸುಧಾರಿಸುತ್ತಿದ್ದು, ಕ್ರಿಕೆಟ್ ದಿಗ್ಗಜರಾದ ಸಚಿನ್ ಹಾಗೂ ಸೌರವ್ ಗಂಗೂಲಿಯಂತೆ...
ಶಿಖರ್ ಧವನ್
ಶಿಖರ್ ಧವನ್
Updated on: 

ಕೊಲ್ಕತ್ತಾ: ಪರಸ್ಪರ ತಿಳುವಳಿಕೆಯಿಂದ ಪಂದ್ಯದಿಂದ ಪಂದ್ಯಕ್ಕೆ ರೋಹಿತ್ ಶರ್ಮಾ ಹಾಗೂ ನನ್ನ ಆಟ ಸುಧಾರಿಸುತ್ತಿದ್ದು, ಕ್ರಿಕೆಟ್ ದಿಗ್ಗಜರಾದ ಸಚಿನ್ ಹಾಗೂ ಸೌರವ್ ಗಂಗೂಲಿಯಂತೆ ನಮಗೂ ಸುದೀರ್ಘ ವೃತ್ತಿಜೀವನವಿದೆ ಎಂಬ ಭರವಸೆ ಇದೆ ಎಂದು ಟೀಂ ಇಂಡಿಯಾದ ಸ್ಫೋಟಕ ಆಟಗಾರ ಶಿಖರ್ ಧವನ್ ಹೇಳಿದ್ದಾರೆ.

ಕಳೆದ ಸುಮಾರು ಪಂದ್ಯಗಳಿಂದ ರೋಹಿತ್ ಹಾಗೂ ನಾನು ಆರಂಭಿಕರಾಗಿ ಕಣಕ್ಕೀಳಿಯುತ್ತಿದ್ದು, ನಾವು ಪರಸ್ಪರ ಒಬ್ಬರನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ಇಬ್ಬರ ಸ್ವಭಾವವು ಏನು ಎಂಬುದು ತಿಳಿದಿರುವುದರಿಂದ ಆರಂಭಿಕರಾಗಿ ಉತ್ತಮವಾಗಿ ಆಡಲು ಸಾಧ್ಯವಾಗಿದೆ ಎಂದು ಶಿಖರ್ ಧವನ್ ಹೇಳಿದ್ದಾರೆ.

ಟೀಂ ಇಂಡಿಯಾದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಜೋಡಿ ಸುದೀರ್ಘವಾಗಿ ತಂಡದಲ್ಲಿತ್ತು. ಅದೇ ರೀತಿ ನಾವು ಸುದೀರ್ಘವಾಗಿ ತಂಡದಲ್ಲಿ ಆಡಲಿದ್ದು, ಹೆಚ್ಚೆಚ್ಚು ದಾಖಲೆಗಳನ್ನು ಮಾಡುತ್ತೇವೆ. ಇದು ನಮಗೂ ಹಾಗೂ ದೇಶಕ್ಕೂ ಉತ್ತಮ ಕೊಡುಗೆಯಾಗಲಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com