ಪ್ರಿಮಿಯರ್ ಬ್ಯಾಡ್ಮಿಂಟನ್ ಲೀಗ್‍: ಹೊರಗುಳಿದ ಸೈನಾ

ಕಾಲಿನ ಸ್ನಾಯು ಸೆಳೆತದ ಗಾಯದ ಸಮಸ್ಯೆ ಎದುರಿಸುತ್ತಿರುವ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಪ್ರಿಮಿಯರ್ ಬ್ಯಾಡ್ಮಿಂಟನ್ ಲೀಗ್‍ನ ಆರಂಭಿಕ...
ಸೈನಾ ನೆಹ್ವಾಲ್
ಸೈನಾ ನೆಹ್ವಾಲ್

ಮುಂಬೈ: ಕಾಲಿನ ಸ್ನಾಯು ಸೆಳೆತದ ಗಾಯದ ಸಮಸ್ಯೆ ಎದುರಿಸುತ್ತಿರುವ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಪ್ರಿಮಿಯರ್ ಬ್ಯಾಡ್ಮಿಂಟನ್ ಲೀಗ್‍ನ ಆರಂಭಿಕ ಪಂದ್ಯದಿಂದ ಹಿಂದೆಸರಿದರು. ಶನಿವಾರ ಇಲ್ಲಿನ ಸರ್ದಾರ್ ಪಟೇಲ್ ಎನ್‍ಎಸ್ ಸಿಐ ಕ್ರೀಡಾಂಗಣದಲ್ಲಿ ಆರಂಭವಾದ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅವಧ್ ವಾರಿಯರ್ಸ್ ಮತ್ತು ಮುಂಬೈ ರಾಕೆಟ್ಸ್ ತಂಡಗಳು ಸೆಣಸಿದವು. ಅವಧ್ ವಾರಿಯರ್ಸ್ ಪರ ಸೈನಾ ನೆಹ್ವಾಲ್ ಪಂದ್ಯದಲ್ಲಿ ಭಾಗವಹಿಸಲಿಲ್ಲ. 'ಕಳೆದೆರಡು ವಾರಗಳ ಹಿಂದೆ ನಾನು ಗಾಲಿನ ಗಾಯದ ಸಮಸ್ಯೆಗೆ ಸಿಲುಕಿದ್ದೆ. ಈಗ ಚೇತರಿಕೆಯ ಹಂತದಲ್ಲಿದ್ದು, ಮತ್ತೆ ಕಣಕ್ಕಿಳಿದು ಗಾಯದ ಸಮಸ್ಯೆ ಹೆಚ್ಚುವ ಸಾಧ್ಯತೆಗಳಿವೆ. ಈ ವರ್ಷದ ಒಲಿಂಪಿಕ್ಸ್ ಗಾಗಿ ಎಚ್ಚರಿಕೆ ವಹಿಸುತ್ತಿದ್ದೇನೆ'' ಎಂದು ಸೈನಾ ನೆಹ್ವಾಲ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com