ಅವಧ್ ವಾರಿಯರ್ಸ್‍ಗೆ ಜಯ

ಟ್ರಂಪ್ ಪಂದ್ಯದಲ್ಲಿ ಡೆಲ್ಲಿ ಏಸಸ್ ತಂಡದ ಪಿ.ಸಿ. ತುಳಸಿ ವಿರುದ್ಧ ಸುಲಭ ಜಯ ಸಾಧಿಸಿದ ವಿಶ್ವದ 2ನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್ ಗಳಿಸಿದ ಗೆಲವಿನ ಸಹಾಯದಿಂದ...
ಸೈನಾ ನೆಹ್ವಾಲ್
ಸೈನಾ ನೆಹ್ವಾಲ್
Updated on

ಲಖನೌ: ಟ್ರಂಪ್ ಪಂದ್ಯದಲ್ಲಿ ಡೆಲ್ಲಿ ಏಸಸ್ ತಂಡದ ಪಿ.ಸಿ. ತುಳಸಿ ವಿರುದ್ಧ ಸುಲಭ ಜಯ ಸಾಧಿಸಿದ ವಿಶ್ವದ 2ನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್ ಗಳಿಸಿದ ಗೆಲವಿನ ಸಹಾಯದಿಂದ
ಅವಧ್ ವಾರಿಯರ್ಸ್ ತಂಡ, ಸೋಮವಾರ ನಡೆದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಪಂದ್ಯದಲ್ಲಿ ಜಯ ಸಾಧಿಸಿತು.

ಕಳೆದ ಮುಖಾಮುಖಿಯಲ್ಲಿ ಪಾದದ ಉಳುಕಿನಿಂದ ತಮ್ಮ ಮೊದಲ ಪಂದ್ಯದಿಂದ ಹೊರನಡೆದಿದ್ದ ಸೈನಾ, ಚೇತರಿಸಿಕೊಂಡು ಮತ್ತೆ ಟೂರ್ನಿಗೆ ಮರಳಿದ್ದು ಅವರ ಅಭಿಮಾನಿಗಳಲ್ಲಿ ಉತ್ಸಾಹ ಹಾಗೂ ವಾರಿಯಸ್ ಬಳಗಕ್ಕೆ ಶಕ್ತಿ ತಂದಿತ್ತು. ಇತ್ತಂಡಗಳ ನಡುವಿನ ಐದು ಮುಖಾಮುಖಿ ಗಳಲ್ಲಿ ಅವಧ್ ವಾರಿಯರ್ಸ್ ಪರ, ಸೈನಾ ನೆಹ್ವಾಲ್, ಬಿ. ಸಾಯಿ ಪ್ರಣೀತ್ ಅವರು ಕ್ರಮವಾಗಿ ಮಹಿಳೆಯರ ಸಿಂಗಲ್ಸ್ ಹಾಗೂ ಪುರುಷರ ಡಬಲ್ಸ್ ನಲ್ಲಿ ಜಯ ಸಾಧಿ ಸಿದರೆ, ಡಬಲ್ಸ್ನಲ್ಲಿ ಬೊಡಿನ್ ಇಸ್ಸಾರಾ ಹಾಗೂ ಕಾಯ್ ಯುನ್ ಜೋಡಿ ಜಯ ಸಾಧಿಸಿದರೆ, ಏಸಸ್ ತಂಡದ ಪರ ಟಾಮಿ ಸುಗಿಯಾರ್ತೊ ಅವರು ಅವಧ್ ತಂಡದ ಎಸ್. ತನೋಂಗ್ಸಕ್ ವಿರುದ್ಧ ಜಯ ಸಾಧಿ ಸುವ ಮೂಲಕ ತಮ್ಮ ತಂಡಕ್ಕೆ 1 ಅಂಕ ತಂದುಕೊಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com