

ಆಕ್ಲೆಂಡ್: ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯನ್ನು ನ್ಯೂಜಿಲೆಂಡ್ 2-0 ಅಂತರದಿಂದ ಗೆದ್ದುಕೊಂಡಿದೆ. ಭಾನುವಾರ ನಡೆದ 2ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್‍ಗಳಲ್ಲಿ 8 ವಿಕೆಟ್‍ಗೆ 142 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಕೇವಲ 10 ಓವರ್‍ಗಳಲ್ಲಿ 1 ವಿಕೆಟ್ ಗೆ 147 ರನ್ ದಾಖಲಿಸಿ ಗೆಲವು ಪಡೆಯಿತು.
ಎರಡು ದಾಖಲೆ: ಶ್ರೀಲಂಕಾ ವಿರುದ್ಧ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಮಟ್ಟಿಗೆ ಎರಡು ದಾಖಲೆಗಳು ಮೂಡಿಬಂದಿದ್ದು ವಿಶೇಷ. ಆರಂಭಿಕರಾಗಿ ಕಣಕ್ಕಿಳಿದಿದ್ದ ಗುಪ್ಟಿಲ್ ಒಟ್ಟು 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಗುಪ್ಟಿಲ್, ಟಿ20ಯಲ್ಲಿ ವೇಗದ ಅರ್ಧಶತಕಗಳಿಸಿದ ನ್ಯೂಜಿಲೆಂಡ್‍ನ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಆದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮುನ್ರೊ, 14 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಗುಪ್ಟಿಲ್ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು!
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ 20 ಓವರ್‍ಗಳಲ್ಲಿ 8 ವಿಕೆಟ್‍ಗೆ 142 (ಮ್ಯಾಥ್ಯೂಸ್ 81, ದಿಲ್ಷಾನ್ 28, ಎಲಿಯಟ್ 22ಕ್ಕೆ 4) ನ್ಯೂಜಿಲೆಂಡ್ 10 ಓವರ್ ಗಳಲ್ಲಿ 1 ವಿಕೆಟ್‍ಗೆ 147 (ಗುಪ್ಟಿಲ್ 63, ಮುನ್ರೊ ಅಜೇಯ 50, ತಿಸಾರ 26ಕ್ಕೆ 1)
ಪಂದ್ಯಶ್ರೇಷ್ಠ: ಕೊಲಿನ್ ಮುನೊ