ಮೆಸ್ಸಿಗೆ ಬಲ್ಲಾನ್ ಡಿ'ಆರ್ ಗರಿ

ಅರ್ಜೆಂಟೀನಾ ಫುಟ್ಬಾಲಿಗ ಹಾಗೂ ಬಾರ್ಸಿಲೋನಾ ಕ್ಲಬ್‍ನ ಸ್ಟಾರ್ ಆಟಗಾರ ಲಯೋನೆಲ್ ಮೆಸ್ಸಿ ಸತತ ಐದನೇ ಬಾರಿಗೆ ಬಲ್ಲಾನ್ ಡಿ'ಆರ್ ಪ್ರಶಸ್ತಿ ಗೆಲ್ಲುವುದರೊಂದಿಗೆ ಈ ಸಾಧನೆ ಮಾಡಿದ ವಿಶ್ವದ ಏಕೈಕ ಫುಟ್ಬಾಲಿಗ ಎನಿಸಿದ್ದಾರೆ.
ಲಿಯೋನಲ್ ಮೆಸ್ಸಿ (ಸಂಗ್ರಹ ಚಿತ್ರ)
ಲಿಯೋನಲ್ ಮೆಸ್ಸಿ (ಸಂಗ್ರಹ ಚಿತ್ರ)
Updated on

ಜ್ಯೂರಿಚ್: ಅರ್ಜೆಂಟೀನಾ ಫುಟ್ಬಾಲಿಗ ಹಾಗೂ ಬಾರ್ಸಿಲೋನಾ ಕ್ಲಬ್‍ನ ಸ್ಟಾರ್ ಆಟಗಾರ ಲಯೋನೆಲ್ ಮೆಸ್ಸಿ ಸತತ ಐದನೇ ಬಾರಿಗೆ ಬಲ್ಲಾನ್ ಡಿ'ಆರ್ ಪ್ರಶಸ್ತಿ ಗೆಲ್ಲುವುದರೊಂದಿಗೆ ಈ ಸಾಧನೆ  ಮಾಡಿದ ವಿಶ್ವದ ಏಕೈಕ ಫುಟ್ಬಾಲಿಗ ಎನಿಸಿದ್ದಾರೆ.

ಕಳೆದೆರಡು ಬಾರಿ ಫಿಫಾದ ವರ್ಷದ ಫುಟ್ಬಾಲ್ ಆಟಗಾರ ಎನಿಸಿಕೊಂಡಿದ್ದ ಪೋರ್ಚುಗಲ್ ನ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಈ ಬಾರಿ ಮೆಸ್ಸಿ ಹಿಮ್ಮೆಟ್ಟಿಸಿದ್ದಾರೆ. ಕಳೆದ ವರ್ಷ  ಬಾರ್ಸಿಲೋನಾ ಗೆದ್ದ ಐದು ಪ್ರಮುಖ ಪ್ರಶಸ್ತಿಗಳಲ್ಲಿ ಈ ಮುಂಪಡೆ ಆಟಗಾರ ಮೆಸ್ಸಿಯ ಕಾಣಿಕೆ ದೊಡ್ಡದಾಗಿತ್ತು. ಮೆಸ್ಸಿಯ ಆರ್ಭಟದಿಂದಾಗಿ ರೊನಾಲ್ಡೊ ಪ್ರತಿನಿಧಿಸುವ ರಿಯಲ್ ಮ್ಯಾಡ್ರಿಡ್ ಕ್ಲಬ್ ಕಳೆದ ವರ್ಷ ಯಾವುದೇ ಪ್ರಶಸ್ತಿ ಗೆದ್ದಿರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com