ಸಿಡ್ನಿ: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ನೂತನವಾಗಿ ಜನಿಸಿರುವ ಪುತ್ರಿಗೆ ಇಂಡಿ ರೇ ಎಂದು ನಾಮಕರಣ ಮಾಡಲಾಗಿದೆ.
ವಾರ್ನರ್ ಹಾಗೂ ಅವರ ಪತ್ನಿ ಕ್ಯಾಂಡಿಸ್‍ಗೆ ಈಗಾಗಲೇ 16 ತಿಂಗಳು ವಯಸ್ಸಿನ ಇವಿ ಮೇ ಎಂಬ ಮುದ್ದಾದ ಹೆಣ್ಣು ಮಗುವಿದೆ. ಇಬ್ಬರೂ ಮಕ್ಕಳನ್ನು ಎತ್ತಿಕೊಂಡ ಭಾವಚಿತ್ರ ವನ್ನು ವಾರ್ನರ್, ಇನ್‍ಸ್ಟಾ ಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.
ಕ್ಯಾಂಡಿಸ್ ಅವರು ಈ ವಾರ ಮಗುವಿಗೆ ಜನ್ಮ ನೀಡ ಲಿರುವುದು ಮೊದಲೇ ತಿಳಿದಿದ್ದರಿಂದ ವಾರ್ನರ್, ಭಾರತ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ.