ಹೊಸ ಗೆಳತಿಯೊಂದಿಗೆ ಕ್ರಿಸ್‍ಮಸ್ ರಾತ್ರಿ ಕಳೆದಿದ್ದ ರೊನಾಲ್ಡೋ

ಲೆಕ್ಕ ಹಾಕಿದರೆ ಫುಟ್ಬಾಲಿಗ ಕ್ರಿಸ್ಟಿಯಾನೊ ರೊನಾಲ್ಡೋಗೆ ತಿಂಗಳಿಗೊಬ್ಬರು ಗರ್ಲ್ಫ್ರೆಂಡ್ ಬೇಕು. ಯುರೋಪಿನ ಗಾಸಿಪ್ ಮ್ಯಾಗಜಿನ್‍ಗಳಲ್ಲಿ ರೊನಾಲ್ಡೋ ಕ್ರಿಸ್ ಮಸ್, ಹೊಸ...
ರೊನಾಲ್ಡೋ
ರೊನಾಲ್ಡೋ

ಲೆಕ್ಕ ಹಾಕಿದರೆ ಫುಟ್ಬಾಲಿಗ ಕ್ರಿಸ್ಟಿಯಾನೊ ರೊನಾಲ್ಡೋಗೆ ತಿಂಗಳಿಗೊಬ್ಬರು ಗರ್ಲ್ಫ್ರೆಂಡ್ ಬೇಕು. ಯುರೋಪಿನ ಗಾಸಿಪ್ ಮ್ಯಾಗಜಿನ್‍ಗಳಲ್ಲಿ ರೊನಾಲ್ಡೋ ಕ್ರಿಸ್ ಮಸ್, ಹೊಸ ವರ್ಷವನ್ನು  ಯಾರೊಂದಿಗೆ ಕಳೆದ ಅನ್ನೋದೇ ಚರ್ಚೆ ಆಗಿತ್ತು.

ಕೊನೆಗೂ ರೊನಾಲ್ಡೋ ಕಳಿದಿದ್ದು ಹೊಸಾ ಮಾಡೆಲ್ ಜೊತೆ ಎಂಬುದೀಗ ಪಬ್ಲಿಕ್ ಆಗಿದೆ. ಕೊಲಂಬಿಯನ್ ಮಾಡೆಲ್ ನಟಾಲಿ ರಿಂಕನ್ ಜೊತೆ ಮಿಯಾಮಿಯಲ್ಲಿ ಕಳೆದಿದ್ದನಂತೆ. ನಟಾಲಿ ಈತನ  ಪಾಲಿಗೆ 27ನೇ ಗರ್ಲ್ಫ್ರೆಂಡ್! ಇಬ್ಬರೂ ಒಟ್ಟಿಗೆ ಇರುವ ಫೋಟೋಗಳನ್ನು `ವಿಯಾ' ಗಾಸಿಪ್ ಮ್ಯಾಗಜಿನ್ ಪ್ರಕಟಿಸಿದೆ. ರೊನಾಲ್ಡೋ ಈಕೆಯ ಕುತ್ತಿಗೆ ಕಿಸ್ ಕೊಡುತ್ತಿರುವ ಫೋಟೋವನ್ನೂ ಇದು  ಪ್ರಕಟಿಸಿದೆ.

ಈ ಸುದ್ದಿ  ವೈರಲ್ ಆಗುತ್ತಿದ್ದಂತೆಯೇ ಅತ್ತ ಕೊಲಂಬಿಯಾದಲ್ಲಿ ನಟಾಲಿ ರಿಂಕನ್ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಸಂಪಾದಿಸಿದ್ದಾಳಂತೆ. ಕೇವಲ ಎರಡೇ ದಿನದಲ್ಲಿ ಪಾಪ್ ತಾರೆ ಶಕೀರಾಗಿಂತ  ಹೆಚ್ಚು ಫೇಮಸ್ಸಾಗಿದ್ದಾಳಂತೆ ನಟಾಲಿ. ಇದಕ್ಕೆ ಸಾಕ್ಷಿ ಗೂಗಲ್ ಸರ್ಚ್!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com