

ಅನಂತಪುರ: ನಿಯತಕಾಲಿಕವೊಂದರಲ್ಲಿ ವಿಷ್ಣುವಿನಂತೆ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ಎಂ.ಎಸ್.ಧೋನಿ ವಿರುದ್ಧ ಇಲ್ಲಿನ ಕೋರ್ಟ್ ಹೊರಡಿಸಿದ್ದ ವಾರಂಟ್ ಅನ್ನು ಹಿಂಪಡೆದಿದೆ.
ಈ ಬಗ್ಗೆ ಅವರ ಕ್ರೀಡಾ ಚಟುವಟಿಕೆ ನೋಡಿಕೊಳ್ಳುತ್ತಿರುವ ರಿತಿ ಸ್ಪೋರ್ಟ್ಸ್ ಹೇಳಿಕೆ ನೀಡಿದೆ. ``ರಜನೀಶ್ ಛೋಪ್ರಾ ನೇತೃತ್ವದ ಕಾನೂನು ತಂಡ ಕೋರ್ಟ್ ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದೆ'' ಎಂದು ತಿಳಿಸಿದೆ. ``ವಾರಂಟ್ ನೀಡಿದ್ದು ಧೋನಿ ಗಮನಕ್ಕೆ ಬಂದಿಲ್ಲ. ಖುದ್ದಾಗಿ ಹಾಜರಾಗಲು ಸಮನ್ಸ್ ನೀಡಲಾಗಿಲ್ಲ. ಹೀಗಾಗಿ ಜ.7ರಂದು ಹಾಜರಾಗಲು ಸಾಧ್ಯವಾಗಲಿಲ್ಲ,'' ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.