ಮೂರನೇ ಸುತ್ತು ಪ್ರವೇಶಿಸಿದ ಸಾನಿಯಾ-ಹಿಂಗಿಸ್ ಜೋಡಿ

ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಸ್ ನ ಮಾರ್ಟಿನಾ ಹಿಂಗಿಸ್ ಜೋಡಿ ಮೂರನೇ ಸುತ್ತು ಪ್ರವೇಶಿಸಿದೆ...
ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ (ಸಂಗ್ರಹ ಚಿತ್ರ)
ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ (ಸಂಗ್ರಹ ಚಿತ್ರ)

ಮೆಲ್ಬೋರ್ನ್: ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಸ್ ನ ಮಾರ್ಟಿನಾ ಹಿಂಗಿಸ್ ಜೋಡಿ ಮೂರನೇ  ಸುತ್ತು ಪ್ರವೇಶಿಸಿದೆ.

ಟೂರ್ನಿಯಲ್ಲಿ ತಮ್ಮ ಗೆಲುವಿನ ನಾಗಾಲೋಟವನ್ನು ಮುಂದುವರೆಸಿರುವ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ ಆಸ್ಟ್ರೇಲಿಯಾ ಓಪನ್ ಟೂರ್ನಿಯ 2ನೇ ಸುತ್ತಿನ ಪಂದ್ಯದಲ್ಲಿ  ಉಕ್ರೇನ್ ನ ಕಿಚನೋಕ್ ಸಹೋದರಿಯರನ್ನು ಸೋಲಿಸುವ ಮೂಲಕ 3ನೇ ಸುತ್ತು ಪ್ರವೇಶಿಸಿದ್ದಾರೆ. ತೀವ್ರ ಕುತೂಹಲದಿಂದ ಕೂಡಿದ್ದ ಪಂದ್ಯದಲ್ಲಿ ಸ್ಯಾಂಟಿನಾ ಜೋಡಿ ಜೋಡಿ 6-2, 6-3  ನೇರ ಸೆಟ್​ಗಳಿಂದ ಉಕ್ರೇನ್​ನ ಕಿಚನೋಕ್ ಸಹೋದರಿಯರನ್ನು ಸೋಲಿಸಿದರು.

ಇದು ಸಾನಿಯಾ-ಹಿಂಗಿಸ್ ಜೋಡಿಗೆ ಸತತ 32ನೇ ಗೆಲುವಾಗಿದ್ದು, ಮೂರನೇ ಸುತ್ತಿನಲ್ಲಿ ರಷ್ಯಾದ ಕುಜ್ನೆತ್ಸೋವಾ ಮತ್ತು ಇಟಲಿಯ ವಿನ್ಸಿ ಅವರನ್ನು ಎದುರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com