ಪ್ರೊ ಕಬಡ್ಡಿ: ಟೈಟಾನ್ಸ್ ಮಣಿಸಿದ ಬೆಂಗಳೂರು ಬುಲ್ಸ್ ತಂಡಕ್ಕೆ 3ನೇ ಗೆಲುವು

ಬೆಂಗಳೂರು ಬುಲ್ಸ್ ತಂಡದ ರೈಡರ್ ರೋಹಿತ್ ಕುಮಾರ್ ಅಮೋಘ ಆಟದಿಂದಾಗಿ ಬುಲ್ಸ್ ತಂಡ ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿದೆ...
ಬೆಂಗಳೂರು ಬುಲ್ಸ್
ಬೆಂಗಳೂರು ಬುಲ್ಸ್

ಹೈದರಾಬಾದ್: ಬೆಂಗಳೂರು ಬುಲ್ಸ್ ತಂಡದ ರೈಡರ್ ರೋಹಿತ್ ಕುಮಾರ್ ಅಮೋಘ ಆಟದಿಂದಾಗಿ ಬುಲ್ಸ್ ತಂಡ ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿದೆ.

4ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಬೆಂಗಳೂರು ಬುಲ್ಸ್ ತಂಡ ತೆಲುಗು ಟೈಟಾನ್ಸ್ ತಂಡವನ್ನು 30-28 ಅಂಕಗಳಿಂದ ಮಣಿಸಿ ರೋಚಕ ಜಯ ಗಳಿಸಿದೆ.

ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಂಗಳೂರು ಬುಲ್ಸ್ 3 ಪಂದ್ಯಗಳನ್ನು ಗೆದ್ದಿದ್ದರೆ, ಟೈಟಾನ್ಸ್ ಗೆ ಸತತ 4ನೇ ಸೋಲಾಗಿದೆ. ಬುಲ್ಸ್ ರೈಡರ್ ರೋಹಿತ್ ಕುಮಾರ್ 11 ಅಂಕಗಳನ್ನು ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com