ಭಾರತ ತಂಡ ವಿಶ್ವದ ಬಲಿಷ್ಠ ತಂಡದೊಂದಿಗೆ ಸೆಣೆಸುತ್ತಿಲ್ಲ ಎಂಬುದು ನನಗೆ ತಿಳಿದಿದೆ. ಆದರೆ ಭಾರತ ತಂಡ ತನಗೆ ಸಿಕ್ಕಿರುವ ತಂಡದೊಂದಿಗೆ ಸೆಣೆಸುತ್ತಿದ್ದು, ಈ ಸರಣಿಯನ್ನು ಸ್ಪರ್ಧಾತ್ಮಕವಾಗಿಸಬೇಕಾದರೆ ವೆಸ್ಟ್ ಇಂಡೀಸ್ ತಂಡ ಅವರ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಿದೆ. ಭಾರತ ತಂಡ ವೇಗಿಗಳು ಮಾಡಿದ ಬೌಲಿಂಗ್ ಮಾಡಿದ ರೀತಿಯ ಭರವಸೆಯಿಂದ ಯಾವುದೇ ರೀತಿಯ ಬದಲಾವಣೆ ಮಾಡದೇ ಎರಡನೇ ಟೆಸ್ಟ್ ಪಂದ್ಯವನ್ನಾಡಲಿದೆ. ಭಾರತೀಯ ಕ್ರಿಕೆಟ್ ತಂಡದ ಕೋಚ್ ಅನಿಲ್ ಕುಂಬ್ಳೆ ಹಾಗೂ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾತ್ ಕೋಹ್ಲಿ ಗೆ ಸಂತೃಪ್ತಿಯಾಗುವ ವಿಷಯವೆಂದರೆ ಅದು ಆಂಟಿಗುವಾ ಪಿಚ್ ನಲ್ಲಿ ವೇಗಿಗಳು ಬೌಲ್ ಮಾಡಿದ ಗತಿಯಾಗಿದ್ದರೆ, ಮತ್ತಷ್ಟು ಸಂತೃಪ್ತಿಕರ ವಿಷಯ ವೇಗಿಗಳ ಸ್ಥಿರತೆ. ಲೈನ್ ಹಾಗೂ ಲೆಂತ್ ಗಳ ವಿಷಯದಲ್ಲಿ ವೇಗಿಗಳು ತಪ್ಪು ಮಾಡುವಂತೆ ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್ ಗಳು ವೇಗಿಗಳಿಗೆ ಒತ್ತಡ ಹೇರುತ್ತಾರೆ. ಆದರೆ ವೆಸ್ಟ್ ಇಂಡೀಸ್ ತಂಡದ ಆಟಗಾರರ್ಯಾರೂ ಭಾರತ ತಂಡದ ಬೌಲರ್ ಗಳ ಮೇಲೆ ಇಂತಹ ಒತ್ತಡ ಹೇರಲಿಲ್ಲ. ವೆಸ್ಟ್ ಇಂಡೀಸ್ ತನ್ನ ಪ್ರದರ್ಶನ/ ಆಟವನ್ನು ಹೇಗೆ ಉತ್ತಮಗೊಳಿಸುತ್ತದೆ ಎಂಬ ಬಗ್ಗೆ ನಡೆಯುತ್ತಿರುವ ಚರ್ಚೆ ಬಗ್ಗೆ ಭಾರತ ಹೆಚ್ಚು ಗಮನಹರಿಸಬೇಕಿಲ್ಲ. ವೆಸ್ಟ್ ಇಂಡೀಸ್ ತಂಡ ಅಲ್ಜಾರ್ರಿ ಜೋಸೆಫ್ ಎಂಬ ಹೊಸ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡಿದೆ. ಈಗಿರುವ ವೆಸ್ಟ್ ಇಂಡೀಸ್ ತಂಡದ ಉಳಿದ ವೇಗಿಗಳಿಂದ ವಿರಾಟ್ ಕೋಹ್ಲಿ ಹಾಗೂ ತಂಡಕ್ಕೆ ಪಂದ್ಯ ಗೆಲ್ಲುವುದು ಸುಲಭವಾಯಿತು.