ಮೆಸ್ಸಿಗೆ 35ನೇ ಹ್ಯಾಟ್ರಿಕ್, ಜಯಭೇರಿ ಬಾರಿಸಿದ ಬಾರ್ಸಿಲೋನಾ

ಲಾ ಲಿಗಾ ಫುಟ್ಬಾಲ್ ಪಂದ್ಯದಲ್ಲಿ 35ನೇ ಹ್ಯಾಟ್ರಿಕ್ ಬಾರಿಸುವ ಮೂಲಕ ಲಿಯೋನೆಲ್ ಮೆಸ್ಸಿ ಗುರುವಾರ ಹೊಸ ದಾಖಲೆ ಸೃಷ್ಟಿಸಿದ್ದಾರೆ...
ಲಿಯೋನೆಲ್ ಮೆಸ್ಸಿ
ಲಿಯೋನೆಲ್ ಮೆಸ್ಸಿ
ಮ್ಯಾಡ್ರಿಡ್: ಇಲ್ಲಿ ನಡೆಯುತ್ತಿರುವ ಲಾ ಲಿಗಾ ಫುಟ್ಬಾಲ್ ಪಂದ್ಯದಲ್ಲಿ 35ನೇ ಹ್ಯಾಟ್ರಿಕ್ ಬಾರಿಸುವ ಮೂಲಕ ಲಿಯೋನೆಲ್ ಮೆಸ್ಸಿ ಗುರುವಾರ ಹೊಸ ದಾಖಲೆ ಸೃಷ್ಟಿಸಿದ್ದಾರೆ. ರಯೋ ವಲ್ಲೆಕನೋ ವಿರುದ್ಧ ನಡೆದ ಪಂದ್ಯದಲ್ಲಿ ಬಾರ್ಸಿಲೋನಾ 5-1 ಅಂತರಲ್ಲಿ ಗೆಲುವು ಸಾಧಿಸಿದ್ದು, ಈ ಮೂಲಕ ಬಾರ್ಸಿಲೋನಾ 35ನೇ ಬಾರಿ ಸತತ ಗೆಲವು ದಾಖಲಿಸಿದ ತಂಡವಾಗಿ ಮೆರೆದಿದೆ.
ಪಂದ್ಯ ಆರಂಭವಾದ 22ನೇ ನಿಮಿಷದಲ್ಲಿ ಬಾರ್ಸಿಲೋನಾದ ಇವಾನ್ ರಾಕಿಟಿಕ್ ಮೊದಲ ಗೋಲು ಬಾರಿಸಿದರು. ಇದಾದ ನಂತರ ತಕ್ಷಣವೇ ನೇಮರ್‌ನ ಸಹಾಯದಿಂದ ಮೆಸ್ಸಿ 2ನೇ ಗೋಲು ಬಾರಿಸಿದರು. 41 ನೇ ನಿಮಿಷದಲ್ಲಿ ಬಾರ್ಸಿಲೋನಾ ಕ್ರೀಡಾಳು ರಾಕಿಟಿಕ್ ಅವರನ್ನು ಫೌಲ್ ಮಾಡಿದ್ದಕ್ಕೆ ರಿಯೋ ಕ್ರೀಡಾಳು ಡಿಗೋ ಲೋರೆಂಟ್‌ಗೆ ರೆಫ್ರಿ ರೆಡ್ ಕಾರ್ಡ್ ತೋರಿಸಿದರು.
53 ನೇ ನಿಮಿಷದಲ್ಲಿ ಮತ್ತು 72 ನೇ ನಿಮಿಷದಲ್ಲಿ ಒಂದೊಂದು ಗೋಲು ದಾಖಲಿಸುವ ಮೂಲಕ ಮೆಸ್ಸಿ ಹ್ಯಾಟ್ರಿಕ್ ಗೋಲುಗಳ ದಾಖಲೆ ತಮ್ಮದಾಗಿಸಿಕೊಂಡರು. 86ನೇ ನಿಮಿಷದಲ್ಲಿ ಟುರಾನ್ ಇನ್ನೊಂದು ಗೋಲು ಬಾರಿಸಿದ್ದು, ಈ ಮೂಲಕ ಬಾರ್ಸಿಲೋನಾ 5 ಗೋಲುಗಳನ್ನು ಪಡೆದುಕೊಂಡಿತು. ಇತ್ತ ರಿಯೋ ತಂಡಕ್ಕೆ ಕೇವಲ ಒಂದು ಗೋಲು ಬಾರಿಸಲಷ್ಟೇ ಸಾಧ್ಯವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com