ಈ ಮೂಲಕ ಭಾರತ ಮತ್ತು ಪಾಕಿಸ್ತಾನ ತಂಡಗಳು ಮಾರ್ಚ್ 19ರಂದು ನಿರ್ಣಾಯಕ ಗ್ರೂಪ್ 2 ಹಣಾಹಣಿಯಲ್ಲಿ ಮುಖಾಮುಖಿಯಾಗಲಿವೆ. ಧರ್ಮಶಾಲಾ ಒಟ್ಟು 8 ಪಂದ್ಯಗಳನ್ನು ಆಯೋಜಿಸುತ್ತಿದೆ. ಅರ್ಹತಾ ಸುತ್ತಿನಿಂದ 6 ಮತ್ತು ಎರಡು ಮುಖ್ಯಪಂದ್ಯಗಳು. ಎರಡೂ ಮುಖ್ಯಪಂದ್ಯಗಳು ರೋಚಕ ಪಂದ್ಯಗಳಾಗಿದ್ದು, ಒಂದು ಭಾರತ-ಪಾಕ್ ನಡುವೆ ಮತ್ತು ಇನ್ನೊಂದು ನ್ಯೂಜಿಲೆಂಡ್ ವಿರುದ್ಧ ಆಸ್ಟ್ರೇಲಿಯಾ ಪಂದ್ಯವಾಗಿದೆ.