ಕ್ರೀಡೆ

ಧರ್ಮಶಾಲಾದಲ್ಲಿ ಇಂಡೋ-ಪಾಕ್ ಪಂದ್ಯ: ಭದ್ರತಾ ಪರಿಶೀಲನೆಗೆ ಪಾಕ್‌ ತಂಡ

ಧರ್ಮಶಾಲಾದಲ್ಲಿ ಇಂಡೋ-ಪಾಕ್ ಪಂದ್ಯ: ಭದ್ರತಾ ಪರಿಶೀಲನೆಗೆ ಪಾಕ್‌ ತಂಡ
ಭಾರತ-ಪಾಕಿಸ್ತಾನ
Published On :

ಇಸ್ಲಾಮಾಬಾದ್: ಮಾರ್ಚ್ 19ರಂದು ಧರ್ಮಶಾಲಾದಲ್ಲಿ ಟೀಂ ಇಂಡಿಯಾ ಹಾಗೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆಯಬೇಕಿರುವ ವಿಶ್ವಕಪ್ ಟಿ20 ಪಂದ್ಯಕ್ಕೆ ವಿರೋಧಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ತನ್ನ ಭದ್ರತಾ ತಂಡವನ್ನು ಕಳುಹಿಸಿ ಪರಿಸ್ಥಿತಿಯನ್ನು ಪರಿಶೀಲಿಸಲು ಪಾಕಿಸ್ತಾನ ಸರ್ಕಾರ ತೀರ್ಮಾನಿಸಿದೆ.

ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್, ತಮ್ಮ ಗೃಹ ಸಚಿವರಿಗೆ ಭಾರತಕ್ಕೆ ಭದ್ರತಾ ತಂಡವೊಂದನ್ನು ಕಳುಹಿಸಿ ಸ್ಥಿತಿಗತಿಗಳನ್ನು ಪರಿಶೀಲಿಸುವಂತೆ ತಿಳಿಸಿದ್ದಾರೆ. ಅದರ ವರದಿಯನ್ನು ಗಮನಿಸಿ ಭಾರತಕ್ಕೆ, ತಂಡ ಕಳುಹಿಸುವುದೋ ಬೇಡವೋ ಎಂದು ನಿರ್ಧರಿಸುತ್ತೇವೆಂದು ಪಿಸಿಬಿ ಮುಖ್ಯಸ್ಥ ಶಹರ್ಯಾರ್‌ ಖಾನ್‌ ಹೇಳಿದ್ದಾರೆ.

ಹುತಾತ್ಮ ಯೋಧರ ತವರು ನೆಲವಾಗಿರುವ ಹಿಮಾಚಲ ಪ್ರದೇಶಕ್ಕೆ ಪಾಕಿಸ್ತಾನ ಕ್ರಿಕೆಟಿಗರು ಬಂದು ಆಡುವುದನ್ನು ಯೋಧರ ಕುಟುಂಬ ವರ್ಗ ವಿರೋಧಿಸಿದೆ. ಈ ಸಂಬಂಧ ಕೇಂದ್ರಕ್ಕೆ ಪತ್ರ ಬರೆದ ಹಿಮಾಚಲ ಮುಖ್ಯಮಂತ್ರಿ ವೀರಭದ್ರ ಸಿಂಗ್, ಪಂದ್ಯಕ್ಕೆ ಭದ್ರತೆ ನೀಡುವುದು ಕಷ್ಟ ಎಂದು ಹೇಳಿದ್ದರು.

ಧರ್ಮಶಾಲಾದಲ್ಲಿ ಪಂದ್ಯ ನಡೆಯುವುದೇ ಆದರೆ ಪಿಚ್ ಅಗೆಯುವುದಾಗಿ ಭಯೋತ್ಪಾದನೆ ವಿರೋಧಿ ಪಡೆಯ ರಾಷ್ಟ್ರೀಯ ಅಧ್ಯಕ್ಷ ವೀರೇಂದ್ರ ಶಾಂಡಿಲ್ಯ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.