ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್: ಸೆಮಿಸ್‌ಗೆ ಪಿವಿ ಸಿಂಧು, ಸೈನಾ ನೆಹ್ವಾಲ್

ರಿಯೋ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಮತ್ತು ಲಂಡನ್ ಒಲಿಂಪಿಕ್ ಕಂಚು ಪದಕ ವಿಜೇತೆ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಟೂರ್ನಿಯಲ್ಲಿ...
ಪಿವಿ ಸಿಂಧು, ಸೈನಾ ನೆಹ್ವಾಲ್
ಪಿವಿ ಸಿಂಧು, ಸೈನಾ ನೆಹ್ವಾಲ್
ಗ್ಲಾಸ್ಗೋ: ರಿಯೋ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಮತ್ತು ಲಂಡನ್ ಒಲಿಂಪಿಕ್ ಕಂಚು ಪದಕ ವಿಜೇತೆ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಟೂರ್ನಿಯಲ್ಲಿ ಸೆಮಿಫೈನಲ್ ಗೆ ತಲುಪಿದ್ದಾರೆ. 
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಸ್ಕಾಟ್ಲಾಂಡ್ ನ ಕ್ರಿಸ್ಟಿ ಗಿಲ್ಮೌರ್ ವಿರುದ್ಧ 21-19, 18-21, 21-15 ಅಂತರದಿಂದ ಜಯ ಗಳಿಸಿ ಸೆಮಿಫೈನಲ್ ತಲುಪಿದ್ದಾರೆ. ಇನ್ನು ಸೆಮಿಫೈನಲ್ ಪಂದ್ಯದಲ್ಲಿ 7ನೇ ಶ್ರೆಯಾಂಕಿತೆ ನೋಜೊಮಿ ಒಕುಹರಾ ವಿರುದ್ಧ ಸೆಣೆಸಲಿದ್ದಾರೆ. 
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ 4ನೇ ಶ್ರೇಯಾಂಕಿತೆ ಪಿವಿ ಸಿಂಧು ಚೀನಾದ ಸನ್ ಯು ವಿರುದ್ಧ 21-14, 21-9 ನೇರ ಸೆಟ್ ಗಳಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದಾರೆ. ಇನ್ನು ಸೆಮಿಫೈನಲ್ ಪಂದ್ಯದಲ್ಲಿ ಜಗತ್ತಿನ 10ನೇ ಶ್ರೇಯಾಂಕಿತೆ ಚೀನಾದ ಚೇನ್ ಯೂಫಿ ವಿರುದ್ಧ ಸೆಣೆಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com