

ರಾಯಚೂರು: 2018ರ ಹಾಕಿ ವಿಶ್ವಕಪ್ ಗೆಲ್ಲುವ ವಿಶ್ವಾಸವಿದೆ ಎಂದು ಭಾರತ ಹಾಕಿ ತಂಡದ ಆಟಗಾರ ಆರ್.ವಿ ರಘುನಾಥ ಹೇಳಿದ್ದಾರೆ.
ಎರಡು ದಿನಗಳ ಕಾಲ ರಾಯಚೂರಿನಲ್ಲಿ ಅಂತಾರಾಜ್ಯ ರಿಂಕ್ ಹಾಕಿ ಕ್ರೀಡೆಯ ನಡೆಯುತ್ತಿದ್ದು ಈ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ರಘುನಾಥ್ ಅವರು ಭಾರತ ಹಾಕಿ ತಂಡ ಹಂತ ಹಂತವಾಗಿ ಸುಧಾರಣೆಯಾಗುತ್ತಿದ್ದು 2018ರ ಹಾಕಿ ವಿಶ್ವಕಪ್ ಗೆಲ್ಲುವ ಭರವಸೆ ಇದೆ ಎಂದು ಹೇಳಿದ್ದಾರೆ.
ಈ ಮಧ್ಯೆ ಭಾರತದ ಹಾಕಿ ತಂಡಕ್ಕೆ ಸ್ಕಿಲ್ ಇಲ್ಲವೆಂದು ಜರ್ಮನಿ ಹಾಕಿ ತಂಡದ ಕೋಚ್ ಹೇಳಿದ್ದು ಇದು ಸರಿಯಲ್ಲ. ಯಾಕೆಂದರೆ ವಿಶ್ವ ಯಾರ್ಕಿಂಗ್ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಹೀಗಿರುವಾಗ ಸ್ಕಿಲ್ ಇಲ್ಲ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದ್ದಾರೆ.