ಅಂಡರ್-17 ಫೀಫಾ ವಿಶ್ವಕಪ್ ಗೆ ಮುನ್ನ ಶಾಲೆಗಳು ಪರೀಕ್ಷೆ ಮುಗಿಸಬೇಕು: ಗೋವಾ ಸರ್ಕಾರ ಸುತ್ತೋಲೆ

ರಾಜ್ಯದಲ್ಲಿರುವ ಶಾಲೆಗಳು ಮೊದಲ ಅವಧಿಯ ಪರೀಕ್ಷೆಗಳ ಮರು ವೇಳಾಪಟ್ಟಿಯನ್ನು ಪ್ರಕಟಿಸುವಂತೆ ಗೋವಾ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಪಣಜಿ: ರಾಜ್ಯದಲ್ಲಿರುವ ಶಾಲೆಗಳು ಮೊದಲ ಅವಧಿಯ ಪರೀಕ್ಷೆಗಳ ಮರು ವೇಳಾಪಟ್ಟಿಯನ್ನು ಪ್ರಕಟಿಸುವಂತೆ ಗೋವಾ ಸರ್ಕಾರ ಶಾಲೆಗಳಿಗೆ ಸೂಚಿಸಿದೆ. ಪರೀಕ್ಷೆ ಕಳೆದರೆ ವಿದ್ಯಾರ್ಥಿಗಳು ನಿರಾಳವಾಗಿ 17 ವರ್ಷಕ್ಕಿಂತ ಕೆಳಗಿನವರ ಫೀಫಾ ವಿಶ್ವಕಪ್ ಪಂದ್ಯವನ್ನು ವೀಕ್ಷಿಸಬಹುದು ಎಂಬುದು ಸರ್ಕಾರದ ನಿರ್ಧಾರವಾಗಿದೆ. ಗೋವಾದ ಪಣಜಿಯಲ್ಲಿ ಅಕ್ಟೋಬರ್ ತಿಂಗಳಿನಿಂದ ಫೀಫಾ ವಿಶ್ವಕಪ್ ಪಂದ್ಯ ನಡೆಯಲಿದೆ.
ಈ ಸಂಬಂಧ ಶಾಲೆಗಳಿಗೆ ಸುತ್ತೋಲೆ ಕಳುಹಿಸಿರುವ ಶಿಕ್ಷಣ ಇಲಾಖೆ, ಶಾಲೆಯ ಮೊದಲ ಅವಧಿಯ ಪರೀಕ್ಷೆಯ ಮರು ವೇಳಾಪಟ್ಟಿ ಬಿಡುಗಡೆ ಮಾಡುವಂತೆ ಅಥವಾ ಪರೀಕ್ಷೆಗಳನ್ನು ಅಕ್ಟೋಬರ್ 7ಕ್ಕೆ ಮೊದಲು ಮುಗಿಸುವಂತೆ ಸೂಚಿಸಿದೆ ಎಂದು ಶಿಕ್ಷಣ ಇಲಾಖೆ ನಿರ್ದೇಶಕ ಜಿ.ಪಿ.ಭಟ್ ತಿಳಿಸಿದ್ದಾರೆ.
ಎಂದಿನ ತರಗತಿಗಳು ಮೊದಲ ಅವಧಿಯ ಮುಗಿಯುವವರೆಗೆ ಇರುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
17 ವರ್ಷಕ್ಕಿಂತ ಕೆಳಗಿನವರ ಫೀಫಾ ವಿಶ್ವಕಪ್ನ ಕೆಲ ಪಂದ್ಯಗಳು ಗೋವಾದಲ್ಲಿ ಅಕ್ಟೋಬರ್  7ರಿಂದ 21ರವರೆಗೆ ಜವಹರಲಾಲ್ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ಸುತ್ತೋಲೆ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com