ಭೂಮಿಕಾ ಶರ್ಮಾಗೆ ಮಿಸ್ ವರ್ಲ್ಡ್ ಬಾಡಿ ಬಿಲ್ಡಿಂಗ್ ಚ್ಯಾಂಪಿಯನ್ ಶಿಪ್ ಪಟ್ಟ

Published On :
ನವದೆಹಲಿ: 21 ವರ್ಷದ ಭಾರತದ ಭೂಮಿಕಾ ಶರ್ಮಾ ಮಿಸ್ ವರ್ಲ್ಡ್ ಬಾಡಿ ಬಿಲ್ಡಿಂಗ್ ಚ್ಯಾಂಪಿಯನ್ ಶಿಪ್ ಮುಡಿಗೇರಿಸಿಕೊಂಡಿದ್ದಾರೆ.
ಡೆಹ್ರಾಡೂನ್ ಮೂಲದ ಭೂಮಿಕಾ ಬಾಡಿ ಪೊಸಿಂಗ್, ವಯಕ್ತಿಕ ಬಾಡಿ ಪೋಸಿಂಗ್ ಹಾಗೂ ಪಾಲ್ ವಿಭಾಗದಲ್ಲಿ ಗರಿಷ್ಠ ಅಂಕ ಸಂಪಾದಿಸಿದ್ದಾರೆ.
ವಿಶ್ವಾದ್ಯಂತ 50 ಸ್ಪರ್ದಿಗಳು ಭಾಗವಹಿಸಿದ್ದರು. ಭಾರತದಿಂದ ಪಾಲ್ಗೋಂಡಿದ್ದ 27 ಮಂದಿಯಲ್ಲಿ ಭೂಮಿಕಾ ಒಬ್ಬರಾಗಿದ್ದರು.
ಭೂಮಿಕ ತಾಯಿ ಮುನ್ರಾಲ್ ಶರ್ಮಾ ಭಾರತೀಯ ಮಹಿಳಾ ವೇಟ್ ಲಿಫ್ಟಿಂಗ್ ತಂಡದ ಮುಖ್ಯ ತರಬೇತುದಾರರಾಗಿದ್ದಾರೆ.
ಸಣ್ಣ ವಯಸ್ಸಿನಿಂದಲೂ ಬಾಡಿ ಬಿಲ್ಡಿಂಗ್ ಬಗ್ಗೆ ಭೂಮಿಕಾ ಆಸಕ್ತಿ ಹೊಂದಿದ್ದರು. ಡಿಸೆಂಬರ್ ನಲ್ಲಿ ನಡೆಯುವ ವಿಶ್ವ ಯೂನಿವರ್ಸ್ ಚ್ಯಾಂಪಿಯನ್ ಶಿಪ್ ಗೆ ಸಿದ್ದತೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತBhumika SharmaMiss World Bodybuilding Championshipಭೂಮಿಕಾ ಶರ್ಮಾಮಿಸ್ ವರ್ಲ್ಡ್ ಬಾಡಿ ಬಿಲ್ಡಿಂಗ್ ಚ್ಯಾಂಪಿಯನ್ ಶಿಪ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


