ಕ್ರೀಡೆ

ಚೆನ್ನೈ: ಕಾರು ಅಪಘಾತದಲ್ಲಿ ಎಫ್ 4 ರೇಸರ್ ಅಶ್ವಿನ್ ಸುಂದರ್ ದಂಪತಿ ಸಜೀವ ದಹನ

ಚೆನ್ನೈ: ಕಾರು ಅಪಘಾತದಲ್ಲಿ ಎಫ್ 4 ರೇಸರ್ ಅಶ್ವಿನ್ ಸುಂದರ್ ದಂಪತಿ ಸಜೀವ ದಹನ
ರೇಸರ್ ಅಶ್ವಿನ್ ಸುಂದರ್
Published On :

ಚೆನ್ನೈ: ಭೀಕರ ಕಾರು ಅಪಘಾತದಲ್ಲಿ ಖ್ಯಾತ ಕಾರು ರೇಸರ್ ಅಶ್ವಿನ್ ಸುಂದರ್ ಮತ್ತು ಅವರ ಪತ್ನಿ ನಿವೇದಿತಾ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಶನಿವಾರ ಮುಂಜಾನೆ ಸುಮಾರು 3 ಗಂಟೆ ಹೊತ್ತಿನಲ್ಲಿ ಚೆನ್ನೈನ ಪಟ್ಟಿನಂಪಕ್ಕಂ ನಲ್ಲಿ ಈ ಅಪಘಾತ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಅಶ್ವಿನ್ ಅವರ ಬಿಎಂಡಬಲ್ಯೂ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಅಶ್ವಿನ್ ಹಾಗೂ ಅವರ ಪತ್ನಿ ನಿವೇದಿತಾ ಸಜೀವವಾಗಿ ದಹನವಾಗಿದ್ದಾರೆ. ಮೂಲಗಳ ಪ್ರಕಾರ ರೇಸರ್ ಅಶ್ವಿನ್ ಸುಂದರ್ ಪತ್ನಿ ಸಮೇತರಾಗಿ ಶುಕ್ರವಾರ ರಾತ್ರಿ ಸ್ನೇಹಿತರೊಬ್ಬರ ಮನೆಗೆ ತೆರಳಿದ್ದರು. ಮಧ್ಯರಾತ್ರಿ ಮನೆಗೆ ವಾಪಸ್ ಬರುವಾಗ ಚೆನ್ನೈನ ಪಟ್ಟಿನಂಪಕ್ಕಂ ಸಮೀಪ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ. ಬಳಿಕ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು, ಢಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿಯ ನಡುವೆ ತೀವ್ರ ಗಾಯಗೊಂಡಿದ್ದ ಅಶ್ವಿನ್ ದಂಪತಿ ಹೊರಬರುವ ಪ್ರಯತ್ನ ಮಾಡಿದ್ದರಾದರೂ, ಅದು ಸಾಧ್ಯವಾಗದೇ ಕಾರಿನಲ್ಲೇ ಸಜೀವವಾಗಿ ದಹನವಾಗಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಅಶ್ವಿನ್ ಅವರ ಕಾರು ಅತೀ ವೇಗದಿಂದ ಚಲಿಸುತ್ತಿತ್ತು. ಅವರ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಇನ್ನು 1985 ಜುಲೈ 27ರಂದು ಜನಿಸಿದ್ದ ಅಶ್ವಿನ್ ಸುಂದರ್, 2003ರಲ್ಲಿ ಮೊದಲ ಬಾರಿಗೆ ಎಂಆರ್ ಎಫ್ ಮಾಂಡಿಯಲ್ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಬಳಿಕ 2012 ಮತ್ತು 2013ರಲ್ಲಿ ಸತತ 2 ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿ ಮೆರೆದಿದ್ದರು. ಅಶ್ವಿನ್ ಅವರ ಸಾವಿಗೆ ರೇಸಿಂಗ್ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.